Publish Date: Mon, 06 May 2019 (18:55 IST)
Updated Date: Mon, 06 May 2019 (18:57 IST)
ಸತತ ಐದು ಗಂಟೆಗಳ ಕಾಲ ಮೊನ್ನೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಕುಟುಂಬದವರ ನಡೆಸಿದ ಪೂಜೆ ಅದು ಯಾಗ ಅಲ್ವಂತೆ.
ಅದು ನಿಖಿಲ್ ಅಥವಾ ಪ್ರಜ್ವಲ್ ಗೆಲುವಿಗೆ ಮಾಡಿಸಿದ ಪೂಜೆಯಲ್ಲ. ಆ ಪೂಜೆಯಲ್ಲಿ ನಿಖಿಲ್ ಮತ್ತು ಪ್ರಜ್ವಲ್ ಹಾಗೂ ನನ್ನ ಮತ್ತು ಕುಮಾರಸ್ವಾಮಿಯವರ ಪತ್ನಿ ಭಾಗಿಯಾಗಿರಲಿಲ್ಲ. ಹೀಗಂತ ಸಚಿವ ಹೆಚ್.ಡಿ.ರೇವಣ್ಣ ಹೇಳಿದ್ದಾರೆ.
ಲೋಕ ರಿಸಲ್ಟ್ 23 ರ ನಂತರ ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ಬೀಳಲ್ಲ. ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಏಳಕ್ಕೆ ಏಳೂ ಸ್ಥಾನ ಗೆದ್ದರೆ ಆಶ್ಚರ್ಯವಿಲ್ಲ. ಬಿ.ಎಸ್.ಯಡಿಯೂರಪ್ಪ ತಿರುಪತಿಗೆ ಹೋಗಿದ್ದರು. ಈಗ ಜಗದೀಶ್ ಶೆಟ್ಟರ್ ಗೂ ಯಾವುದಾದರೂ ದೇವಸ್ಥಾನಕ್ಕೆ ಹೋಗಲು ಹೇಳಿ ಎಂದು ವ್ಯಂಗ್ಯವಾಡಿದರು.
ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ತಂದೆಗೆ ಇಬ್ಬರು ಪತ್ನಿಯರು. ಆ ಇಬ್ಬರು ಪತ್ನಿಯರು ಹಾಗೂ ದೇವೇಗೌಡರ ಅಜ್ಜಿ ಈ ಮೂವರೂ ಸಹ ಪ್ಲೇಗ್ ನಿಂದ ಮೃತಪಟ್ಟಿದ್ದರು.
ಅವರ ಸದ್ಗತಿ ಆಗಬೇಕೆಂದು ಜ್ಯೋತಿಷಿಗಳು ಸಲಹೆ ಮಾಡಿದ ಹಿನ್ನೆಲೆಯಲ್ಲಿ ನಮ್ಮ ತಂದೆಯವರು ಚಿಕ್ಕಮಗಳೂರಿನ ಕಾಪು ಬಳಿ ಶ್ರಾದ್ಧ ಕರ್ಮ ನೆರವೇರಿಸಿದ್ದಾರೆ. ಇದು ನಿಖಿಲ್ ಅಥವಾ ಪ್ರಜ್ವಲ್ ಗೆಲುವಿಗೆ ಮಾಡಿಸಿದ ಪೂಜೆಯಲ್ಲ. ಆ ಪೂಜೆಯಲ್ಲಿ ನಿಖಿಲ್ ಮತ್ತು ಪ್ರಜ್ವಲ್ ಹಾಗೂ ನನ್ನ ಮತ್ತು ಕುಮಾರಸ್ವಾಮಿಯವರ ಪತ್ನಿ ಭಾಗಿಯಾಗಿರಲಿಲ್ಲ ಎಂದರು.
ನಾವು ಚಿಕ್ಕಮಗಳೂರಿಗೆ ಹೋಗಿದ್ದು ಪೂಜೆ ಮಾಡಿಸಲು ಅಲ್ಲ. ಬದಲಿಗೆ ಪಿಂಡ ಪ್ರದಾನ ಮಾಡುವ ಶ್ರಾದ್ಧ ಕರ್ಮ ಮಾಡಿಸಲು ಹೋಗಿದ್ದೆವು ಅಂತ ಸಚಿವ ರೇವಣ್ಣ ಸ್ಪಷ್ಟನೆ ಕೊಟ್ಟಿದ್ದಾರೆ.