Publish Date: Sat, 08 Feb 2020 (10:58 IST)
Updated Date: Sat, 08 Feb 2020 (10:59 IST)
ಬೆಂಗಳೂರು : ವೆಬ್ ಸೈಟ್ ಗಳ ಮೂಲಕ ಹೈಟೆಕ್ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ನಾಲ್ವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ರಘು, ಪ್ರಜ್ವಲ್, ಕುಮಾರ್ ಹಾಗೂ ಭರತ್ ಬಂಧಿತ ಆರೋಪಿಗಳು. ಇವರು ಉತ್ತರ ಭಾರತ ಮೂಲದ ಯುವತಿಯರನ್ನು ಹೆಚ್ಚಿನ ಹಣ ಮಾಡುವ ಆಸೆ ಹುಟ್ಟಿಸಿ ಬೆಂಗಳೂರಿಗೆ ಕರೆತರುತ್ತಿದ್ದರು. ಪ್ರತಿಷ್ಠಿತ ಏರಿಯಾದಲ್ಲಿ ಮನೆ ಬಾಡಿಗೆ ಪಡೆದು ವೇಶ್ಯಾವಾಟಿಕೆ ದಂಧೆ ಶುರುಮಾಡುತ್ತಿದ್ದು, ಪೊಲೀಸರಿಗೆ ಅನುಮಾನ ಬಾರದಂತೆ ವೆಬ್ ಸೈಟ್ ಗಳ ಮೂಲಕವೇ ಗಿರಾಕಿಗಳನ್ನು ಬುಕ್ ಮಾಡುತ್ತಿದ್ದರು.
ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಬೆಂಗಳೂರಿನ ಸಿಸಿಬಿ ಪೊಲೀಸರು ಇದೀಗ ನಾಲ್ವರು ಆರೋಪಿಗಳನ್ನು ಬಂಧಿಸಿ 10 ಮಂದಿ ಯುವತಿಯರನ್ನು ರಕ್ಷಿಸಿದ್ದಾರೆ.
pavithra
Publish Date: Sat, 08 Feb 2020 (10:58 IST)
Updated Date: Sat, 08 Feb 2020 (10:59 IST)