55 ದಿನಗಳ ನಂತರ ಪತ್ತೆಯಾಯ್ತು ಬೋಟ್ ಅವಶೇಷ!

Webdunia
ಗುರುವಾರ, 7 ಫೆಬ್ರವರಿ 2019 (18:13 IST)
ರಾಜ್ಯದ ಬೋಟ್ ವೊಂದರ ಅವಶೇಷ 55 ದಿನಗಳ ನಂತರ ನೆರೆಯ ರಾಜ್ಯದ ಕಡಲ ತೀರದಲ್ಲಿ ಪತ್ತೆಯಾಗಿದೆ.

ಕಡಲ ತೀರದಲ್ಲಿ ಮುಳುಗಿದ್ದ ಬೋಟಿನ ಭಾಗ ಪತ್ತೆಯಾಗಿದೆ. ಮಹಾರಾಷ್ಟ್ರದ ರತ್ನಗಿರಿ ಬಳಿ ಬೋಟಿನ ಅವಶೇಷ ಕಾಣಿಸಿಕೊಂಡಿದ್ದು, ಇದು ನಾಪತ್ತೆಯಾದ ಮಲ್ಪೆ ಮೂಲದ ಬೋಟಿನ ಅವಶೇಷ ಎನ್ನುವ ಶಂಕೆ ವ್ಯಕ್ತವಾಗಿದೆ.
ಅಂಕೋಲಾ ತಾಲೂಕಿನ ಬೇಲೆಕೇರಿ ಮೂಲದ ಮೀನುಗಾರನ ಕಣ್ಣಿಗೆ ಬೋಟಿನ ಅವಶೇಷ ಕಂಡುಬಂದಿದೆ.

ರತ್ನಗಿರಿ ಬಳಿ ಮೀನುಗಾರಿಕೆಗೆ ತೆರಳಿದ್ದಾಗ ತೇಲುತ್ತಿದ್ದ ಬೋಟಿನ ಭಾಗ ಗಮನಿಸಿರುವ ಮೀನುಗಾರ ಈ ಬಗ್ಗೆ ಕರಾವಳಿ ಕಾವಲು ಪಡೆ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಮೀನುಗಾರನಿಂದ ಸಂಪೂರ್ಣ ಮಾಹಿತಿಯನ್ನು ರಾಜ್ಯದ ಕರಾವಳಿ ಕಾವಲು ಪಡೆ ಪೊಲೀಸರು ಪಡೆದುಕೊಂಡಿದ್ದಾರೆ. ಡಿಸೆಂಬರ್ ನಲ್ಲಿ ಮಲ್ಪೆಯಿಂದ ರತ್ನಗಿರಿಗೆ ಮೀನುಗಾರಿಕೆಗೆ ತೆರಳಿದ್ದ ಸುವರ್ಣ ತ್ರಿಭುಜ ಎನ್ನುವ ಬೋಟ್ ನಾಪತ್ತೆಯಾಗಿತ್ತು. ಬೋಟಿನಲ್ಲಿದ್ದ ರಾಜ್ಯದ 7 ಮೀನುಗಾರರು ನಾಪತ್ತೆಯಾಗಿದ್ದರು.
ಮೀನುಗಾರರ ನಾಪತ್ತೆ ಪ್ರಕರಣ ಇನ್ನೂ ನಿಗೂಢವಾಗಿದೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬರ ಪರಿಸ್ಥಿತಿಯಿಂದ ಕುಡಿಯುವ ನೀರಿಗೆ ತೊಂದರೆ ಆಗಬಾರದೆಂದು ಡಿಕೆ ಶಿವಕುಮಾರ್ ಮಹತ್ವದ ಘೋಷಣೆ

ಬಂಟ್ವಾಳದ ಲಾವಣ್ಯ ಹತ್ಯೆ ಪ್ರಕರಣ: ಸಾಮಾಜಿಕ ಜಾಲತಾಣದಲ್ಲಿ ಕೋಮು ಪ್ರಚೋದನೆ ನೀಡಿದವರಿಗೆ ಬಿಗ್ ಶಾಕ್

ಅಯೋಧ್ಯೆ ರಾಮಮಂದಿರದ ದೇಣಿಗೆ 'ಕಳ್ಳತನ': ಪ್ರಧಾನಿ ಮೋದಿಗೆ ಪತ್ರ ಬರೆದ ರಾಹುಲ್‌, ಖರ್ಗೆ

ದೀರ್ಘಕಾಲದ ಸಂಗಾತಿ ಕಳೆದುಕೊಂಡ ದೇವೇಗೌಡರ ಕಣ್ಣೀರು ಒರೆಸಿ ಸಂತೈಸಿದ ಮಾಜಿ ಸಿಎಂ ಸಿದ್ದರಾಮಯ್ಯ

ರಾಮಮಂದಿರ ದೇಣಿಗೆ ವಿವಾದ, ಪ್ರಧಾನ ಮಂತ್ರಿಯವರೇ, ಮೌನ ಮುರಿಯಿರಿ: ಜೈರಾಮ್ ರಮೇಶ್

ಮುಂದಿನ ಸುದ್ದಿ
Show comments