ಜಿಲ್ಲಾಡಳಿತ ಹೇರಿರುವ ನಿಷೇಧದ ನಡುವೆಯೂ ಕುರಿಮರಿ ಎಸೆದು ಹರಕೆಯನ್ನು ಭಕ್ತ ಸಮೂಹ ತೀರಿಸಿದ ಘಟನೆ ನಡೆದಿದೆ.
ಯಾದಗಿರಿ ತಾಲೂಕಿನ ಮೈಲಾಪುರ ಮೈಲಾರಲಿಂಗೇಶ್ವರ ಜಾತ್ರೆ ವೇಳೆ ಈ ಘಟನೆ ನಡೆದಿದೆ.
ಮೈಲಾರಲಿಂಗೇಶ್ವರ ಪಲ್ಲಕ್ಕಿ ಮೆರವಣಿಗೆ ಮೂಲಕ ಗಂಗಾ ಸ್ನಾನಕ್ಕೆ ತೆರಳುವ ವೇಳೆ ಕುರಿಮರಿಗಳನ್ನು ಭಕ್ತ ಸಮೂಹ ಎಸೆದು ತಮ್ಮ ಹರಕೆ ತೀರಿಸಿದರು.
ಪಲ್ಲಕ್ಕಿ ಮೇಲೆ ಎರಡು ಕುರಿಗಳನ್ನು ಭಕ್ತರು ಎಸೆದರು. ಪಲ್ಲಕ್ಕಿ ಮೇಲೆ ಕುರಿ ಎಸೆಯುವುದರಿಂದ ಕುರಿಗಳ ಸಂಖ್ಯೆ ಹೆಚ್ಚಳವಾಗುತ್ತವೆ ಎನ್ನುವ ನಂಬಿಕೆ ಜನರಲ್ಲಿದೆ. ಜಿಲ್ಲಾಡಳಿತ ಕುರಿಮರಿ ಎಸೆಯುವುದನ್ನು ತಡೆಯಲು ಅಗತ್ಯ ಕ್ರಮ ಕೈಗೊಂಡರೂ ಅದು ವಿಫಲವಾಗಿದೆ. ಮೈಲಾರಲಿಂಗೇಶ್ವರ ಜಾತ್ರೆಯಲ್ಲಿ ಲಕ್ಷಾಂತರ ಭಕ್ತರು ಭಾಗಿ ದರ್ಶನ ಪಡೆದುಕೊಂಡರು.