ಇತಿಹಾಸ ಪ್ರಸಿದ್ದ ಕಸ್ತೂರು ದೊಡ್ಡಮ್ಮತಾಯಿ ಜಾತ್ರೆ ಅದ್ಧೂರಿಯಾಗಿ ನೆರವೇರಿತು.
ಚಾಮರಾಜನಗರ ತಾಲೂಕಿನ ಕಸ್ತೂರಿನಲ್ಲಿರುವ ದೊಡ್ಡಮ್ಮತಾಯಿ ಮತ್ತು ಮಹದೇಶ್ವರ ದೇವಸ್ಥಾನದಲ್ಲಿ ಬಂಡಿಜಾತ್ರೆ ಬಹಳ ವಿಜೃಂಭಣೆಯಿಂದ ಜರುಗಿತು.
ಸುತ್ತಮುತ್ತಲ 23 ಗ್ರಾಮಗಳಿಗೆ ಪ್ರಮುಖವಾಗಿ ನಡೆಯುವ ಜಾತ್ರಾಮಹೋತ್ಸವ ಇದಾಗಿದೆ. 23 ಗ್ರಾಮಗಳಿಂದಲೂ ಒಂದೊಂದು ಬಂಡಿ ಜಾತ್ರಾ ಸ್ಥಳಕ್ಕೆ ಆಗಮಿಸುತ್ತದೆ.
ಬಂಡಿ ಜಾತ್ರಾ ಸ್ಥಳಕ್ಕೆ ಹೊರಡುವ ಮುನ್ನ, ಹರಕೆ ಹೊತ್ತವರು ಬಂಡಿಗೆ ಇಡುಗಾಯಿಯನ್ನ ಹೊಡೆಯುತ್ತಾರೆ. ಇದರಿಂದ ತಮ್ಮ ಇಷ್ಠಾರ್ಥ ಸಿದ್ಧಿಯಾಗುತ್ತದೆ ಎಂಬುದು ಭಕ್ತರ ನಂಬಿಕೆಯಾಗಿದೆ.