ಕಲಬುರಗಿ ಚಿಂಚೋಳಿ ತಾಲ್ಲೂಕಿನ ಕೋಡ್ಲಿ ಹೋಬಳಿ ವ್ಯಾಪ್ತಿಯಲ್ಲಿ ಬರುವ ಕೋಡ್ಲಿ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್‌ನಲ್ಲಿ ಮೋದಲಿನಂತೆ ಯಥಾ ಪ್ರಕಾರವಾಗಿ 7 ಗ್ರಾಮಗಳ ನಾಗರಿಕರಿಗೆ ಹಣಕಾಸಿನ ವ್ಯವಹಾರ ನಡೆಸಲು ಮತ್ತು ಖಾತೆ ತೆರೆಯಲು ಅನುಮತಿ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಗಿದೆ.
ಕಲಬುರಗಿ ಲಿಡ್ ಬ್ಯಾಂಕ್ ಎದುರು ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾ ಸಮಿತಿ ವತಿಯಿಂದ ಪ್ರತಿಭಟನೆ ಮಾಡಲಾಯಿತು. ಕೋಡ್ಲಿ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ಏಕಾಏಕಿ ದಿಢೀರನೆ ಮೂರು ನಾಲ್ಕು ವರ್ಷಗಳಿಂದ ಕೆಲವು 7 ಗ್ರಾಮಗಳನ್ನು ಕೈಬಿಟ್ಟಿದೆ.
ಇದರಿಂದ ರೈತರು, ವಿದ್ಯಾರ್ಥಿಗಳು, ಮಹಿಳಾ ಸ್ವಸಹಾಯ ಸಂಘಗಳು, ಪಿಎಮಜಿಎಸ್ ವಾಯಿ ಹೀಗೆ ಸರ್ಕಾರದ ವಿವಿಧ ಯೊಜನೆಯ ಪಲಾನುಭವಿಗಳಿಗೆ ಮತ್ತು ಖಾತೆ ಹೊಂದಿದ ನಾಗರಿಕರಿಗೆ ತೊಂದರೆಯಾಗುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು. ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಲಬುರಗಿ ಲಿಡ್ ಬ್ಯಾಂಕ್ ಮುಖ್ಯಪ್ರಭಂದಕರಿಗೆ ಮನವಿ ಸಲ್ಲಿಸಿದರು.