Select Your Language

Notifications

webdunia
webdunia
webdunia
webdunia

ಹಳೇ ರೇಡಿಯೋ, ಟಿವಿಗೆ ಡಿಮ್ಯಾಂಡ್ : ಖೋಟಾ ನೋಟು ಜಾಲ ಪತ್ತೆ

ಖೋಟಾ ನೋಟು
ಖೋಟಾ  ನೋಟು ಚಲಾವಣೆ ಮಾಡುತ್ತಿದ್ದ ವ್ಯಕ್ತಿಗಳನ್ನು  ಬಂಧನ ಮಾಡಲಾಗಿದೆ.

ಹಳೆಯ  ರೇಡಿಯೋ ಮತ್ತು ಟಿ. ವಿ  ಗಳಲ್ಲಿನ  ಕೆಂಪು  ಪಾದರಸದ  ಉಪಕರಣ  ಕೊಳ್ಳುತ್ತೇವೆ  ಎಂದು   ಜನರಿಗೆ ನಂಬಿಸಿ  ಖೋಟಾ  ನೋಟು  ಚಲಾವಣೆ  ಮಾಡುತ್ತಿದ್ದ ಒಟ್ಟು  4 ಜನ ಆರೋಪಿಗಳನ್ನು  ಚಿಕ್ಕಮಗಳೂರು  ಜಿಲ್ಲೆಯ  ಅಲ್ದುರು  ಪೊಲೀಸರು  ಬಂಧಿಸಿದ್ದಾರೆ.

ಬಂಧಿತರು ಬಾಳೆಹೊನ್ನೂರು, ಅಲ್ದುರು  ಭಾಗಗಳಲ್ಲಿ ರೆಡಿಯೋ,  ಟಿ. ವಿ  ಕೊಂಡುಕೊಳ್ಳುವ  ನೆಪದಲ್ಲಿ  ನಕಲಿ  ನೋಟುಗಳನ್ನು  ನೀಡಿ  ಮೋಸ  ಮಾಡುತ್ತಿದ್ದರು  ಎಂದು  ಪೊಲೀಸರು  ತಿಳಿಸಿದ್ದಾರೆ.

ಇತ್ತೀಚೆಗೆ  ಹಳೆಯ  ರೇಡಿಯೋ ,  ಟಿ. ವಿ  ಖರೀದಿಸುವ  ನೆಪದಲ್ಲಿ  ಮೋಸದ  ಪ್ರಕರಣಗಳು  ನಡೆಯುತ್ತಿದ್ದು ಸಾರ್ವಜನಿಕರು  ಈ  ಜಾಲದ  ಬಗ್ಗೆ ಎಚ್ಚರಿಕೆಯಿಂದ  ಇರುವಂತೆ  ಪೊಲೀಸರು  ಮನವಿ  ಮಾಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಚಲಿಸುವ ವಾಹನದಲ್ಲಿ ಮಹಿಳೆಯ ಮಾನಭಂಗಕ್ಕೆ ಯತ್ನ