Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ರಾಜ್ಯದಲ್ಲಿ ದಿನೇ ದಿನೇ ವಿಧಾನಸಭಾ ಚುನಾವಣಾ ಅಖಾಡ ರಂಗೇರುತಿದ್ದು, ಮಾಜಿ ಮುಖ್ಯಮಂತ್ರಿ B.S ಯಡಿಯೂರಪ್ಪ, ಸಿಎಂ ಬೊಮ್ಮಾಯಿ, ಬಿಜಿಪಿ ರಾಜ್ಯಧ್ಯಾಕ್ಷ ವಿಜಯೇಂದ್ರಗೆ ಫುಲ್ ಡಿಮ್ಯಾಂಡ್ ಶುರುವಾಗಿದೆ. ಬಿಜೆಪಿಯನ್ನ ಲಿಂಗಾಯತ ವಿರೋಧಿಯೆಂದು ಬಿಂಬಿಸುತ್ತಿರುವ ಕಾಂಗ್ರೆಸ್ ಆರೋಪದಿಂದ ಟೆನ್ಷನ್ಗೆ ಒಳಗಾಗಿರುವ ಬಿಜೆಪಿ ಅಭ್ಯರ್ಥಿಗಳು, ತಮ್ಮ ಕ್ಷೇತ್ರಕ್ಕೆ ಬಂದು ಪ್ರಚಾರ ಮಾಡುವಂತೆ ಮೂವರು ನಾಯಕರಿಗೆ ಆಹ್ವಾನ ಮಾಡಿದ್ದಾರೆ. ರಾಜ್ಯದಲ್ಲಿ ದೊಡ್ಡ ಪ್ರಮಾಣದ ಲಿಂಗಾಯತ ಸಮುದಾಯವಿದ್ದು, 100ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಲಿಂಗಾಯತ ಮತಗಳೇ ನಿರ್ಣಾಯಕವಾಗಿವೆ. ಉತ್ತರ ಕರ್ನಾಟಕದಲ್ಲಿ ಲಿಂಗಾಯತ ಮತಗಳು ಕೈ ತಪ್ಪುವ ಆತಂಕದಲ್ಲಿರುವ ಬಿಜೆಪಿ ಅಭ್ಯರ್ಥಿಗಳು, ಕ್ಷೇತ್ರಕ್ಕೆ ಬಂದು ಪ್ರಚಾರ ಮಾಡುವಂತೆ, ಬಿಎಸ್ ಯಡಿಯೂರಪ್ಪ , ಸಿಎಂ ಬೊಮ್ಮಾಯಿ, B.Y.ವಿಜಯೇಂದ್ರ, ಯತ್ನಾಳ್ಗೆ ಆಹ್ವಾನ ನೀಡಿದ್ದು, ತಮ್ಮ ತಮ್ಮ ಕ್ಷೇತ್ರಕ್ಕೆ ಬಂದು ಪ್ರಚಾರ ಮಾಡುವಂತೆ ಒತ್ತಡ ಹಾಕುತ್ತಿದ್ದಾರೆ.