Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಮಾಜಿ ಸಿಎಂ ಸಿದ್ದರಾಮಯ್ಯ ಈಗ ಮೀಸಲಾತಿ ಹೆಚ್ಚಳದ ಬಗ್ಗೆ ಮಾತನಾಡುತ್ತಾರೆ. ಆದರೆ ಅವರು ಮುಖ್ಯಮಂತ್ರಿಯಾಗಿದ್ದಾಗ ಏಕೆ ಮಾಡಲಿಲ್ಲ ಎಂದು ಸಚಿವ ಡಾ.ಸಿ.ಎನ್ ಅಶ್ವತ್ಥ್ ನಾರಾಯಣ ಹೇಳಿದ್ದಾರೆ.. ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಾವು ಜನಸಂಖ್ಯೆಗೆ ಅನುಗುಣವಾಗಿ ಕಾನೂನುಬದ್ದವಾಗೇ ಮಾಡಿದ್ದೇವೆ. ಜಾರಿಯಾಗಬಹುದಾದ ಮೀಸಲಾತಿ ಹೆಚ್ಚಳ ನಾವು ಮಾಡಿದ್ದೇವೆ.. ಬಿಜೆಪಿ ಎಂದೂ ಸಹ ಕಾಂಗ್ರೆಸ್ಸಿಗರಂತೆ ಹುಸಿ ಭರವಸೆ ಕೊಡೋದಿಲ್ಲ ಎಂದರು.. ಇನ್ನು ಪ್ರಧಾನಿ ನರೇಂದ್ರ ಮೋದಿಯವರ ಇಂದಿನ ಸಂವಾದ ಕಾರ್ಯಕ್ರಮದಿಂದ ನಮ್ಮೆಲ್ಲ ಕಾರ್ಯಕರ್ತರ ಉತ್ಸಾಹ ಹೆಚ್ಚಿದೆ. ಅಭಿವೃದ್ದಿ ಕಾರ್ಯಗಳು ಹಾಗು ಜನಪರ ಕಾರ್ಯಗಳ ಮೂಲಕ ಜನರ ಬಳಿಗೆ ಹೋಗೋದು ಹೇಗೆ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿಯವರು ಸಾಧಿಸಿ ತೋರಿಸಿದ್ದಾರೆ. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸಮಾಜಘಾತುಕರು ಹಾಗು ದೇಶದ್ರೋಹಿಗಳನ್ನು ಹೇಗೆ ಮಟ್ಟ ಹಾಕಬೇಕು ಎಂದು ತೋರಿಸಿಕೊಟ್ಟಿದ್ದಾರೆ. ಅಂತಹ ಜನಪರವಾದ ಕಾನೂನುಗಳು ಕರ್ನಾಟಕದಲ್ಲೂ ಜಾರಿ ಮಾಡುತ್ತೇವೆ ಎಂದಿದ್ದಾರೆ.