ಕಳೆದ 50 ದಿನಗಳಿಂದ ಕೊರೊನಾ ಪಾಸಿಟಿವ್ ಕೇಸ್ ಇಲ್ಲದೆ ಹಸಿರು ವಲಯದಲ್ಲಿದ್ದ ಕೊಪ್ಪಳ ಜಿಲ್ಲೆಗೆ ಕೊನೆಗೂ ಕೋವಿಡ್ -19 ಕಾಲಿಟ್ಟಿದೆ.
ಮಹಾರಾಷ್ಟ್ರದಿಂದ ಮೇ 13 ರಂದು ಕೊಪ್ಪಳ ಜಿಲ್ಲೆಗೆ ಬಂದಿರುವ ಜನರಲ್ಲಿ ಪರೀಕ್ಷೆಗೊಳಪಡಿಸಿದಾಗ 3 ಜನರಲ್ಲಿ ಪಾಸಿಟಿವ್ ಇರುವುದು ದೃಢಪಟ್ಟಿದೆ.
ಕುಷ್ಟಗಿಯಿಂದ ಒಬ್ಬ ಮಹಿಳೆ ಮತ್ತು ಕೊಪ್ಪಳದ 2 ಜನರಲ್ಲಿ ವೈರಸ್ ಕಾಣಿಸಿಕೊಂಡಿದೆ. ಪಾಸಿಟಿವ್ ಪ್ರಕರಣದ ರೋಗಿಗಳನ್ನು ನಿಯೋಜಿತ ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ.
ಈ ಪೈಕಿ ಎಲ್ಲರೂ ಕ್ವಾರಂಟೈನ್ ನಲ್ಲಿದ್ದು, ಇವರೆಲ್ಲಾ ವಾಹನ ಮೂಲಕ ಕೊಪ್ಪಳ ಜಿಲ್ಲೆ ಪ್ರವೇಶ ಮಾಡಿ ನೇರವಾಗಿ ಕ್ವಾರಂಟೈನ್ ನಲ್ಲಿ ಸೇರಿದ ಬಳಿಕ ಗಂಟಲು ದ್ರವ ಪರೀಕ್ಷೆ ನಂತರ ಪಾಸಿಟಿವ್ ಇರುವುದು ದೃಢಪಟ್ಟಿದೆ.
ಇದೀಗ ಪಾಸಿಟಿವ್ ಬಂದವರ ಪ್ರಾಥಮಿಕ ಸಂಪರ್ಕಕ್ಕೆ ಬಂದ ಜನರನ್ನು ಪತ್ತೆ ಹಚ್ಚಲು ಜಿಲ್ಲಾಡಳಿತ ಮುಂದಾಗಿದೆ.