Publish Date: Mon, 18 May 2020 (14:59 IST)
Updated Date: Mon, 18 May 2020 (15:01 IST)
ಸಾರಿಗೆ ಬಸ್, ಆಟೋ ಹಾಗೂ ಕ್ಯಾಬ್ ಸೇವೆಗೆ ಸರಕಾರ ಅಸ್ತು ಎಂದಿದೆ.
ಕಂಟೈನ್ ಮೆಂಟ್ ಝೋನ್ ಹೊರತುಪಡಿಸಿ ಉಳಿದ ಪ್ರದೇಶಗಳಲ್ಲಿ ಬಸ್, ಆಟೋ, ಕ್ಯಾಬ್ ಗಳು ಓಡಾಡಬಹುದು ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
4ನೇ ಹಂತದ ಲಾಕ್ ಡೌನ್ ಹಿನ್ನೆಲೆಯಲ್ಲಿ ಸರಕಾರದ ಹೊಸ ಮಾರ್ಗಸೂಚಿ ರೂಪಿಸುವ ಸಲುವಾಗಿ ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಲಾಕ್ ಡೌನ್ ಬಹಳಷ್ಟು ಸಡಿಲಿಕೆ ಮಾಡಲು ನಿರ್ಧರಿಸಲಾಗಿದೆ.
ಒಂದು ಬಸ್ ನಲ್ಲಿ 30 ಜನಕ್ಕೆ ಮಾತ್ರ ಪ್ರಯಾಣಕ್ಕೆ ಅವಕಾಶ, ಆಟೋದಲ್ಲಿ ಚಾಲಕ ಸೇರಿ ಇಬ್ಬರಿಗೆ ಮಾತ್ರ ಪ್ರಯಾಣಕ್ಕೆ ಅವಕಾಶ ಕೊಡಲಾಗಿದೆ.