Publish Date: Sat, 16 May 2020 (18:09 IST)
Updated Date: Sat, 16 May 2020 (18:10 IST)
ಗ್ರೀನ್ ಝೋನ್ ನಲ್ಲಿ ಹೊಸದಾಗಿ ಮೂರು ಕೊರೊನಾ ಪಾಸಿಟಿವ್ ಕೇಸ್ ಗಳು ಕಾಣಿಸಿಕೊಳ್ಳುವ ಮೂಲಕ ಸೋಂಕಿತರ ಸಂಖ್ಯೆ 19 ಕ್ಕೆ ಏರಿಕೆಯಾಗಿದೆ.
ದಿನದಿಂದ ದಿನಕ್ಕೆ ಹಾಸನ ಜಿಲ್ಲೆಯಲ್ಲಿ ಕೊವೀಡ್-19 ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿವೆ. ಕಳೆದ ಎರಡು ತಿಂಗಳಿನಿಂದ ರಾಜ್ಯಾದ್ಯಂತ ಹಸಿರು ವಲಯವೆಂದೇ ಗುರುತಿಸಲ್ಪಡುತ್ತಿತ್ತು ಹಾಸನ.
ಮುಂಬೈನಿಂದ ಹಾಸನ ಜಿಲ್ಲೆಗೆ ಮೇ 11 ಮತ್ತು 12 ರಂದು ಆಗಮಿಸಿ ನಂತರ ಹೋಂ ಕ್ವಾರಂಟೈನ್ ಇದ್ದ ವ್ಯಕ್ತಿಗಳಲ್ಲೇ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಡಿಸಿ ತಿಳಿಸಿದ್ದಾರೆ.
ಸೋಂಕಿತರಲ್ಲಿ ಚನ್ನರಾಯಪಟ್ಟಣದ 50 ವರ್ಷ ಮತ್ತು 63 ವರ್ಷದ ಇಬ್ಬರು ಪುರುಷರು ಹಾಗೂ ಇದೇ ಮೊದಲ ಬಾರಿಗೆ ಅರಸೀಕೆರೆ ತಾಲ್ಲೂಕಿನಲ್ಲಿ 20 ವರ್ಷದ ಮಹಿಳೆಯೊಬ್ಬರಲ್ಲಿ ಸೋಂಕು ಕಂಡುಬಂದಿದೆ ಎಂದು ವಿವರ ನೀಡಿದ್ದಾರೆ.