ಮೇಲುಕೋಟೆ : ಮುಂಬೈನಲ್ಲಿ ಮೃತಪಟ್ಟಿದ್ದ ವ್ಯಕ್ತಿಯೊಬ್ಬನಿಂದ ಮೇಲುಕೋಟೆಗೆ ಡೆಡ್ಲಿ ಕೊರೊನಾವೈರಸ್ ಕಾಲಿಟ್ಟಿದೆ ಎನ್ನಲಾಗಿದೆ.
ಮುಂಬೈನಲ್ಲಿ ಕೊಡಗಳ್ಳಿ ನಿವಾಸಿಯೊಬ್ಬರು ಮೃತಪಟ್ಟಿದ್ದರು. ಅವರ ಮೃತದೇಹವನ್ನು ಮುಂಬೈನಿಂದ ನಾಲ್ವರು ವ್ಯಕ್ತಿಗಳು ತಂದಿದ್ದರು. ಸಂಬಂಧಿಕರು ಮೃತದೇಹದ ಅಂತ್ಯಕ್ರಿಯೆ ನಡೆಸಿದ್ದಾರೆ.
ಮುಂಬೈಯಿಂದ ಬಂದಿದ್ದ ನಾಲ್ವರ ಆರೋಗ್ಯ ತಪಾಸಣೆ ಮಾಡದೆ ಜಿಲ್ಲಾಡಳಿತ ಮುಂಬೈ ಗೆ ಅವರನ್ನು ವಾಪಾಸ್ ಕಳಿಸಿದೆ. ಆದರೆ ಇದೀಗ ಮೃತದೇಹ ತಂದಿದ್ದ ನಾಲ್ವರಲ್ಲಿ ಸೋಂಕು ಶಂಕೆ ವ್ಯಕ್ತವಾಗಿದ್ದು, ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ಜನರಲ್ಲಿ ಆತಂಕ ಹೆಚ್ಚಾಗಿದೆ.