ಒಂದೇ ದಿನದಲ್ಲಿ 14 ಕೊರೊನಾ ವೈರಸ್ ಕೇಸ್ ಗಳು ದೃಢಪಟ್ಟಿರುವುದರಿಂದಾಗಿ ಈ ಜಿಲ್ಲೆಯ ಜನರು ಭಯದಲ್ಲಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ಮತ್ತೆ 14 ಜನರಿಗೆ ಕೋವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿದೆ.
ಈ ಹೊಸ 14 ಪ್ರಕರಣಗಳು ಸೇರಿದಂತೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಒಟ್ಟಾರೆ 69 ಕ್ಕೆ ಏರಿದಂತಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆಯು ಮಾಹಿತಿ ನೀಡಿದ್ದು, ಹಿರೇಬಾಗೇವಾಡಿಯಲ್ಲಿ 12 ಹಾಗೂ ಹುಕ್ಕೇರಿ ತಾಲ್ಲೂಕಿನಲ್ಲಿ 2 ಪ್ರಕರಣಗಳು ಕಂಡುಬಂದಿವೆ.
ಇಲ್ಲಿಯವರೆಗೆ ಜಿಲ್ಲೆಯಲ್ಲಿ ಒಟ್ಟಾರೆ ಒಟ್ಟು 69 ಪ್ರಕರಣಗಳು ದೃಢಪಟ್ಟಿದ್ದು, ಎಂಟು ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಒಬ್ಬರು ಮೃತರಾಗಿದ್ದಾರೆ.