Publish Date: Fri, 07 Feb 2020 (06:36 IST)
Updated Date: Fri, 07 Feb 2020 (06:38 IST)
ಬೆಂಗಳೂರು : ಪ್ರಶ್ನೆ : ನನಗೆ 11 ವರ್ಷದ ಮಗನಿದ್ದಾನೆ. ಅವನು ಜೀವಶಾಸ್ತ್ರದ ವಿಷಯದಲ್ಲಿ ತುಂಬಾ ಚೆನ್ನಾಗಿ ಓದುತ್ತಾನೆ. ಮಕ್ಕಳಿಗೆ ಲೈಂಗಿಕ ಶಿಕ್ಷಣದ ಕೊಡಲು ಯಾವ ವಯಸ್ಸು ಉತ್ತಮ? ಪೋಷಕರು ಅಥವಾ ಸಲಹೆಗಾರರು ಈ ವಿಷಯವನ್ನು ಕಲಿಸಬೇಕೆ?
ಉತ್ತರ : ಮಕ್ಕಳು 10, 11 ವಯಸ್ಸಿನವರಾಗಿರುವಾಗಲೇ ಲೈಂಗಿಕ ಶಿಕ್ಷಣ ಕೊಡುವುದು ಉತ್ತಮ. ನಿಮ್ಮ ಮಗನೊಂದಿಗೆ ಯಾವುದೇ ಮುಜುಗರವಿಲ್ಲದೇ ನೀವು ಸರಳ, ಅರ್ಥಪೂರ್ಣ ಚರ್ಚೆಗಳನ್ನು ಮಾಡಬಹುದು. ಮತ್ತು ಲೈಂಗಿಕತೆಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಲು ಹಿಂಜರಿಯದಿರಿ. ಮೊದಲು ನಿಮಗೆ ಉತ್ತಮ ಮಾಹಿತಿ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ನಿಮಗೆ ಅದನ್ನು ನಿರ್ವಹಿಸಲು ಸಾಧ್ಯವಿಲ್ಲವಾದರೆ ಸಲಹೆಗಾರರನ್ನು ಸಂಪರ್ಕಿಸಬಹುದು.