ಬೆಂಗಳೂರು: ಕೊರೋನಾ ಪ್ರಕರಣ ಕಡಿಮೆಯಾಗುತ್ತಿದೆ ಎಂದು ಅಂಕಿ ಅಂಶ ತೋರಿಸಲು ರಾಜ್ಯ ಸರ್ಕಾರ ಕಡಿಮೆ ಟೆಸ್ಟಿಂಗ್ ಮಾಡುತ್ತಿದೆ ಎಂಬ ಆರೋಪಗಳಿಗೆ ಡಿಸಿಎಂ ಅಶ್ವತ್ಥ್ ನಾರಾಯಣ್ ಉತ್ತರ ನೀಡಿದ್ದಾರೆ.
ನಾವು ಕಡಿಮೆ ಟೆಸ್ಟಿಂಗ್ ಮಾಡ್ತಿಲ್ಲ. ಲಾಕ್ ಡೌನ್ ಇರುವ ಕಾರಣ ಜನ ಟೆಸ್ಟ್ ಮಾಡಲು ಹೊರಗೆ ಬರ್ತಿಲ್ಲ ಅಷ್ಟೇ. ಇದರಿಂದಾಗಿ ಕಡಿಮೆ ಟೆಸ್ಟಿಂಗ್ ನಡೆಯುತ್ತಿದೆ ಎಂದಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು ಕೊವಿಶೀಲ್ಡ್ ಮೊದಲ ಡೋಸ್, ಕೊವ್ಯಾಕ್ಸಿನ್ ಎರಡನೇ ಡೋಸ್ ನೀಡಲು ತೀರ್ಮಾನಿಸಿದ್ದೇವೆ. ಜಾಗತಿಕ ಟೆಂಡರ್ ಮೂಲಕ 2 ಕೋಟಿ ಲಸಿಕೆ ತರಿಸಿಕೊಳ್ಳಲಿದ್ದೇವೆ ಎಂದಿದ್ದಾರೆ.