Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ರೇಣುಕಾಸ್ವಾಮಿ ಘಟನೆ ಕಣ್ಣಾರೆ ಕಂಡವರ ಬಾಯಿ ಮುಚ್ಚಿಸಲು ದರ್ಶನ್ ಮಾಡಿದ ಸರ್ಕಸ್ ಅಷ್ಟಿಷ್ಟಲ್ಲ

Darshan

Krishnaveni K

ಬೆಂಗಳೂರು , ಶುಕ್ರವಾರ, 21 ಜೂನ್ 2024 (14:39 IST)
ಬೆಂಗಳೂರು: ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಕರೆತಂದು ಅಮಾನುಷವಾಗಿ ಹಲ್ಲೆ ಮಾಡಿ ಆತ ಸಾವನ್ನಪ್ಪಿದ ಬಳಿಕ ಶಾಕ್ ಗೊಳಗಾದ ದರ್ಶನ್ ಘಟನೆಗೆ ಸಾಕ್ಷಿಯಾಗಿದ್ದವರ ಬಾಯಿ ಮುಚ್ಚಿಸಲು ಸಾಕಷ್ಟು ಪರಿಶ್ರಮಪಟ್ಟಿದ್ದಾರೆ.

ಪಟ್ಟಣಗೆರೆ ಶೆಡ್ ಗೆ ರೇಣುಕಾಸ್ವಾಮಿಯನ್ನು ಕರೆತಂದು ಹಲ್ಲೆ ನಡೆಸುವಾಗ ಅಲ್ಲಿ 30 ಕ್ಕೂ ಹೆಚ್ಚು ಜನ ಇದ್ದರಂತೆ ಎಂದು ಈ ಮೊದಲೇ ಆರೋಪಿಗಳಲ್ಲೊಬ್ಬರಾದ ರವಿ ಆಪ್ತರೊಬ್ಬರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ದರ್ಶನ್ ಆಪ್ತರಲ್ಲದೆ ಅಲ್ಲಿ ಶೆಡ್ ಕಾರ್ಮಿಕರೂ ಇದ್ದರು.

ಅವರೆಲ್ಲರ ಬಾಯಿ ಮುಚ್ಚಿಸುವುದು ದರ್ಶನ್ ಗೆ ದೊಡ್ಡ ಸವಾಲಾಗಿತ್ತು. ಮೊದಲು ಹತ್ಯೆ ಪ್ರಕರಣವನ್ನು ತಾವೇ ಮಾಡಿದ್ದು ಎಂದು ಒಪ್ಪಿಕೊಳ್ಳಲು ಕೆಲವರನ್ನು ತಯಾರು ಮಾಡಬೇಕಾಗಿತ್ತು. ಅದಕ್ಕಾಗಿ ಚಿತ್ರದುರ್ಗದಿಂದ ಬಂದಿದ್ದ ಚಾಲಕ ರವಿಯನ್ನು ಕೇಳಿದಾಗ ಆತ ಒಪ್ಪಿರಲಿಲ್ಲ. ಬಳಿಕ ತಮ್ಮ ಆಪ್ತ ಬಳಗದಲ್ಲಿದ್ದ ಕಾರ್ತಿಕ್, ನಿಖಿಲ್ ನಾಯ್ಕ್, ರಾಘವೇಂದ್ರ, ಕೇಶವಮೂರ್ತಿಗೆ ಶರಣಾಗಲು ಸೂಚಿಸಿದ್ದರು. ಇದಕ್ಕೆ ಪ್ರತಿಯಾಗಿ ಅವರಿಗೆ ಕೊಡಲು 30 ಲಕ್ಷ ರೂ. ಹಣ ಹೊಂದಿಸಿದ್ದರು. ಇದಲ್ಲದೆ ಪ್ರಕರಣದಲ್ಲಿ ತಮ್ಮ ಹೆಸರು ಕೇಳಿಬಂದತೆ ರಕ್ಷಿಸಿಕೊಳ್ಳಲು 40 ಲಕ್ಷ ರೂ. ಹಣ ಸಂಗ್ರಹಿಸಿದ್ದರು. ಇದಕ್ಕಾಗಿ ತಮ್ಮ ಸ್ನೇಹಿತ ಮೋಹನ್ ರಾಜ್ ಎಂಬವರಿಂದ 40 ಲಕ್ಷ ರೂ. ಸಾಲ ಪಡೆದರು. ಈ ಪೈಕಿ 37 ಲಕ್ಷ ರೂ.ಗಳನ್ನು ತಮ್ಮ ಆರ್ ಆರ್ ನಗರದ ನಿವಾಸದಲ್ಲಿಟ್ಟಿದ್ದರು. ಉಳಿದ ಮೂರು ಲಕ್ಷ ರೂ.ಗಳನ್ನು ಪತ್ನಿ ವಿಜಯಲಕ್ಷ್ಮಿ ಕೈಗೆ ಕೊಟ್ಟಿದ್ದರು ಎನ್ನಲಾಗಿದೆ. ಅಂತೂ ಈ ಪ್ರಕರಣವನ್ನು ಮುಚ್ಚಿ ಹಾಕಲು ದರ್ಶನ್ ಬರೋಬ್ಬರಿ 70 ಲಕ್ಷ ರೂ. ಖರ್ಚು ಮಾಡಲು ಮುಂದಾಗಿದ್ದರು. ಆದರೆ ಈ ಎಲ್ಲಾ ಹಣವನ್ನು ಈಗ ಸೀಝ್ ಮಾಡಲಾಗಿದೆ.

ಇನ್ನು, ಘಟನೆ ವೇಳೆ ಅಲ್ಲಿದ್ದ ಶೆಡ್ ನ ಕಾರ್ಮಿಕರಿಗೂ ಪ್ರಕರಣದ ಬಗ್ಗೆ ಬಾಯಿ ಬಿಡದಂತೆ ಹಣದ ಆಮಿಷವೊಡ್ಡಲಾಗಿತ್ತಂತೆ. ಯಾರೂ ತಮ್ಮ ವಿರುದ್ಧ ಸಾಕ್ಷ್ಯ ಹೇಳದಂತೆ ಹಣದ ಆಸೆ ತೋರಿಸಲಾಗಿತ್ತು. ಆದರೆ ಏನೇ ಮಾಡಿದರೂ ಕೊನೆಗೂ ದರ್ಶನ್ ಬಂಧನದಿಂದ ತಪ್ಪಿಸಿಕೊಳ್ಳಲು ಆಗಲಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಡೈರಿ ಕಚೇರಿಯಲ್ಲೇ ಬಿಟ್ಟು ಬಂದೆ ಎಂದ ಅಧಿಕಾರಿ ವಿರುದ್ಧ ಗರಂ ಆದ ಸಿಎಂ ಸಿದ್ದರಾಮಯ್ಯ