Publish Date: Sun, 22 Sep 2019 (19:55 IST)
Updated Date: Sun, 22 Sep 2019 (19:57 IST)
ತಡರಾತ್ರಿ ಭಯಾನಕ ಘಟನೆ ನಡೆದು ಹೋಗಿದೆ.
ಇಟಿಯೋಸ್ ಕಾರು ಮತ್ತು ಕ್ರೂಸರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಘಟನೆಯಿಂದಾಗಿ ನಾಲ್ವರು ಸಾವನ್ನಪ್ಪಿದ್ದರೆ, 6 ಜನರಿಗೆ ಗಂಭೀರ ಗಾಯಗಳಾಗಿವೆ.
ಕಾರಿನಲ್ಲಿದ್ದ ಮುಖೇಶ್ (35), ಮದನ್ ಸಿಂಗ್ (40), ಗೌತಮ್ ಸಿಂಗ್ (38), ಕ್ರೂಸರ್ ಚಾಲಕ ಲೋಕೇಶ್ (40) ಮೃತರಾಗಿದ್ದಾರೆ.
ಕ್ರೂಸರ್ ನಲ್ಲಿದ್ದವರು ಅರಸಿಕೆರೆ ಗೆ ತೆರಳುತ್ತಿದ್ದರು. ಇಟಿಯೋಸ್ ಕಾರಿನಲ್ಲಿದ್ದವರು ಅರಸಿಕೆರೆಯಿಂದ ದಾವಣಗೆರೆಗೆ ತೆರಳುತ್ತಿದ್ದರು.
ಕಲ್ಕೆರೆ ಗ್ರಾಮದ ಬಳಿ ತಡರಾತ್ರಿ ನಡೆದಿರುವ ಘಟನೆ ಇದಾಗಿದೆ. ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಗ್ರಾಮದಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ. ಶ್ರೀರಾಂಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.