Publish Date: Mon, 20 Feb 2023 (15:30 IST)
Updated Date: Mon, 20 Feb 2023 (15:33 IST)
ರೋಹಿಣಿ ಸಿಂಧೂರಿಗೆ ಮಾಧ್ಯಮದವರ ಸವಾಲು ಎದುರಿಸಲು ಧೈರ್ಯ ಇಲ್ಲವೇ? ಉತ್ತರಗಳಿಲ್ಲವೇ? ಐಪಿಎಸ್ ಅಧಿಕಾರಿ ಡಿ.ರೂಪಾ ಮೌದ್ಗಿಲ್ ರೋಹಿಣಿ ಸಿಂಧೂರಿಗೆ ಪ್ರಶ್ನಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ರೂಪಾ ಮೌದ್ಗಿಲ್ ಅವರು, ರೋಹಿಣಿ ಸಿಂಧೂರಿ ಅವರ ಪತಿಯ ಸುದ್ದಿಗೋಷ್ಠಿ ನಡೆಸುತ್ತಿದ್ದಾರೆ ಎಂದರೆ ಏನು ಅರ್ಥ? ರೋಹಿಣಿ ಸಿಂಧೂರಿ ಅವರಿಗೆ ಮಾಧ್ಯಮದವರ ಸವಾಲು ಎದುರಿಸಲು ಧೈರ್ಯ ಇಲ್ಲವೇ? ಉತ್ತರಗಳಿಲ್ಲವೇ? ಅವರ ಪತಿ ಹೇಳೋದು, ಫೋನ್ ಹ್ಯಾಕ್ ಮಾಡಲಾಗಿದೆ ಎಂದು. ಇದು ನಂಬುವ ಮಾತೇ? ಏನೋ ಹೇಳಬೇಕು ಪಾಪ. ಮಾನ ಹರಾಜು ಆಗಿದೆ ಎಂದು ಹೇಳಿದ್ದಾರೆ. ಮತ್ತೊಂದು ಪೋಸ್ಟ್ ನಲ್ಲಿ, ಮಾಧ್ಯಮ ಮಿತ್ರರೇ ಪದೇ ಪದೇ ನನ್ನ ಪ್ರತಿಕ್ರಿಯೆ ಕೇಳುವ ಬದಲು ಸಿಂಧೂರಿ ಅವರನ್ನು ಕೇಳಿ, ಕೆಳಗಿನ ಕಂಪ್ಲೈಂಟ್ ಲೋಕಾಯುಕ್ತದಲ್ಲಿ ರಿಜಿಸ್ಟರ್ ಆಗಿದೆ. ಆಕೆಗೆ 3ನೇ ರಿಮೈಂಡರ್ ಬಂದಿದೆ ಉತ್ತರ ಕೊಡಲು. ಉತ್ತರ ಯಾಕೆ ಇನ್ನೂ ಕೊಟ್ಟಿಲ್ಲ ಎಂದು ಪ್ರಶ್ನಿಸಿದ್ದಾರೆ.