Publish Date: Thu, 19 Dec 2019 (17:22 IST)
Updated Date: Thu, 19 Dec 2019 (17:24 IST)
ಸಚಿವ ಸಿ.ಟಿ.ರವಿಗೆ ಪಾಕಿಸ್ತಾನದಲ್ಲಿ ನೆಂಟರಿರಬೇಕು. ಹೀಗಂತ ಹಾಲಿ ಸಚಿವರ ವಿರುದ್ಧ ಮಾಜಿ ಸಚಿವ ಟಾಂಗ್ ನೀಡಿದ್ದಾರೆ.
ಪಾಕಿಸ್ತಾನದ ಕುರಿತು ಪ್ರಧಾನಿ ನರೇಂದ್ರ ಮೋದಿ ಹಾಗೂ ಸಚಿವ ಸಿ.ಟಿ.ರವಿ ಹೇಳಿಕೆಗಳನ್ನು ಕೊಡುತ್ತಲೇ ಇರುತ್ತಾರೆ. ಪಾಕ್ ಗೆ ಹೋಗಿ ಪ್ರಧಾನಿ ಊಟ ಮಾಡಿ ಬಂದಿದ್ದಾರೆ.
ಇಂಥ ಘಟನೆಗಳನ್ನು ಗಮನಿಸಿದಾಗ ಪಾಕಿಸ್ತಾನದಲ್ಲಿ ಸಿ.ಟಿ.ರವಿಯವರ ಸಂಬಂಧಿಕರು ಇರಬೇಕು ಅಂತ ತಿರುಗೇಟು ನೀಡಿದ್ದಾರೆ.
ಅಂಬೇಡ್ಕರ್ ಭಾರತ ನಮಗೆ ಮುಖ್ಯ. ನಾವು ಅದರಲ್ಲೇ ಇದ್ದೇವೆ. ಆದರೆ ಇವರ ಭಾರತದಲ್ಲಿ ನಾವಿಲ್ಲ ಅಂತ ಮಾಜಿ ಸಚಿವ ಯು.ಟಿ.ಖಾದರ್ ಟೀಕಿಸಿದ್ದಾರೆ.