Publish Date: Thu, 19 Dec 2019 (16:35 IST)
Updated Date: Thu, 19 Dec 2019 (16:36 IST)
ಕೋಲ್ಕೊತ್ತಾ: ಈ ವರ್ಷದ ಐಪಿಎಲ್ ಆವೃತ್ತಿಗೆ ಕ್ರಿಕೆಟಿಗರ ಹರಾಜು ಪ್ರಕ್ರಿಯೆ ಕೋಲ್ಕೊತ್ತಾದಲ್ಲಿ ನಡೆಯುತ್ತಿದ್ದು ಕಿಂಗ್ಸ್ ಇಲೆವೆನ್ ಪಂಜಾಬ್ ಗ್ಲೆನ್ ಮ್ಯಾಕ್ಸ್ ವೆಲ್ ರನ್ನು 10.75 ಕೋಟಿ ರೂ.ಗೆ ಮತ್ತು ಕೆಕೆಆರ್ ತಂಡ ಇಂಗ್ಲೆಂಡ್ ನ ಇಯಾನ್ ಮಾರ್ಗನ್ ರನ್ನು 5.25 ಕೋಟಿ ರೂ.ಗೆ ಖರೀದಿ ಮಾಡಿದೆ.
ಮೊದಲ ಹಂತದಲ್ಲಿ ದುಬಾರಿ ಮೊತ್ತಕ್ಕೆ ಹರಾಜಾದ ಕ್ರಿಕೆಟಿಗ ಪ್ಯಾಟ್ ಕ್ಯುಮಿನ್ಸ್. ಕೆಕೆಆರ್ ಅವರನ್ನು ದಾಖಲೆಯ 15.5 ಕೋಟಿ ರೂ.ಗೆ ಖರೀದಿ ಮಾಡಿದೆ. ಮತ್ತೊಬ್ಬ ಇಂಗ್ಲೆಂಡ್ ಆಲ್ ರೌಂಡರ್ ಕ್ರಿಸ್ ವೋಕ್ಸ್ ಮೂಲಧನ 1.5 ಕೋಟಿ ರೂ.ಗೆ ಡೆಲ್ಲಿ ತಂಡದ ಪಾಲಾಗಿದ್ದಾರೆ. ಉಳಿದಂತೆ ಭಾರತದ ಚೇತೇಶ್ವರ ಪೂಜಾರ, ಹನುಮ ವಿಹಾರಿ ಸೇಲ್ ಆಗದೇ ಉಳಿದಿದ್ದಾರೆ.
ಮೊದಲ ಹಂತದಲ್ಲಿ ಹರಾಜಾದ ಕ್ರಿಕೆಟಿಗರ ಪಟ್ಟಿ ಇಲ್ಲಿದೆ:
ಕ್ರಿಸ್ ಲಿನ್ – ಮುಂಬೈ ಇಂಡಿಯನ್ಸ್ (2 ಕೋಟಿ ರೂ.)
ರಾಬಿನ್ ಉತ್ತಪ್ಪ – ಕಿಂಗ್ಸ್ ಇಲೆವೆನ್ ಪಂಜಾಬ್ (3 ಕೋಟಿ ರೂ.)
ಜೇಸನ್ ರಾಯ್-ಡೆಕ್ಕನ್ ಚಾರ್ಜರ್ಸ್ (1.5 ಕೋಟಿ ರೂ.)
ಆರನ್ ಫಿಂಚ್- ರಾಯಲ್ ಚಾಲೆಂಜರ್ಸ್ ಬೆಂಗಳೂರು (4.4 ಕೋಟಿ ರೂ.)
ಸ್ಯಾಮ್ ಕ್ಯುರೇನ್ ಸಿಎಸ್ ಕೆ (5.5 ಕೋಟಿ ರೂ.)
Krishnaveni K
Publish Date: Thu, 19 Dec 2019 (16:35 IST)
Updated Date: Thu, 19 Dec 2019 (16:36 IST)