Publish Date: Wed, 25 Oct 2023 (16:46 IST)
Updated Date: Thu, 26 Oct 2023 (12:58 IST)
ತಮ್ಮ ಸರ್ಕಾರ ತೆಗೆದ ಬೆಳಗಾವಿ, ಚನ್ನಪಟ್ಟಣ ನಾಯಕರನ್ನು ಹೆಚ್ಡಿಕೆ ತಬ್ಬಾಡ್ತಿದ್ದಾರೆ ಎಂಬ ಡಿಕೆಶಿ ಹೇಳಿಕೆ ವಿಚಾರವಾಗಿ ಸಿ ಪಿ ಯೋಗೀಶ್ವರ್ ಪ್ರತಿಕ್ರಿಯಿಸಿದ್ದಾರೆ.
ನಾವು ಅವರ ರೀತಿ ಅಧಿಕಾರ ಬೇಕು ಅಂತ ಅಣ್ಣ ತಮ್ಮ ಅಂತ ಕೈ ಎತ್ತಲಿಲ್ಲ.ನಮ್ಮ ರಾಜ್ಯದ ರಾಷ್ಟ್ರೀಯ ನಾಯಕರು, ಜೆಡಿಎಸ್ ನವ್ರು ಹೊಂದಾಣಿಕೆ ಮಾಡಿಕೊಂಡಿದ್ದಾರೆ.ಕಾರ್ಯಕರ್ತರಾದ ನಾವು ಹೊಂದಾಣಿಕೆ ಮಾಡ್ಕೋಬೇಕಾಗುತ್ತದೆ.ಅವರ ರೀತಿ ಅಧಿಕಾರ ಬೇಕು, ಅವಕಾಶ ಬೇಕು ಅಂದಾಗ ಅಣ್ಣ ಅನ್ನೋದು, ಜತೆಯಲ್ಲಿದ್ದಾಗ ತಬ್ಬಾಡೋದು ನಾವು ಮಾಡಲ್ಲ.ಅಧಿಕಾರ ಇದ್ದಾಗ ಒಂಥರ, ಇಲ್ಲದಿದ್ದರೆ ಇನ್ನೊಂಥರ, ಒಂದ್ಸಲ ಅಣ್ಣ ಅನ್ನೋದು, ಇನ್ನೊಮ್ಮೆ ವಿರೋಧ ಮಾಡೋದು ನಾವು ಮಾಡಲ್ಲ ಎಂದು ಸಿ ಪಿ ಯೋಗೇಶ್ವರ್ ಹೇಳಿದ್ದಾರೆ.