Publish Date: Thu, 21 Dec 2023 (15:22 IST)
Updated Date: Thu, 21 Dec 2023 (15:18 IST)
ಕೋವಿಡ್ ಆತಂಕದ ಬೆನ್ನಲ್ಲೆ ಬೆಂಗಳೂರಿನ ಪಾಲಿಕೆ ಆಸ್ಪತ್ರೆಗಳಲ್ಲಿ ಟೆಸ್ಟಿಂಗ್ ಆರಂಭ ಮಾಡಲಾಗಿದೆ.ಪಿಪಿಇ ಕಿಟ್ ,ಗ್ಲೌಸ್,ಮಾಸ್ಕ್ ಧರಿಸಿ ಸಿಬ್ಬಂದಿ ಫೀಲ್ಡ್ ಗಿಳಿದಿದ್ದಾರೆ.ಪಿಹೆಚ್ ಸಿಯಲ್ಲಿ ಟೆಸ್ಟಿಂಗ್ ಶುರು ಮಾಡಿದ್ದಾರೆ.ಜನರ ಮಾಹಿತಿ ದಾಖಲಿಸಿಕೊಂಡು ಆಸ್ಪತ್ರೆಯ ಆವರಣದಲ್ಲಿ ಸಿಬ್ಬಂದಿ ಕೋವಿಡ್ ಟೆಸ್ಟ್ ಮಾಡ್ತಿದ್ದಾರೆ.ಕೋವಿಡ್ ಟೆಸ್ಟ್ ಗೆ ನಗರದ ಜನ ಸ್ಪಂದಿಸುತ್ತಿದ್ದಾರೆ.ಸ್ವಯಂಪ್ರೇರಿತರಾಗಿ ಜನರು ಟೆಸ್ಟ್ ಮಾಡಿಸಿಕೊಳ್ತಿದ್ದಾರೆ.
ನಗರದ ಶಾಂತಿನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೊರೋನಾ ಟೆಸ್ಟ್ ಮಾಡಲಾಗ್ತಿದೆ.ಸಾರ್ವಜನಿಕರಿಗೆ ರ್ಯಾಂಡ್ ಟೆಸ್ಟ್ ಪಾಲಿಕೆ ಸಿಬ್ಬಂದಿಗಳು ಮಾಡುತ್ತಿದ್ದಾರೆ.ಈಗಾಗಲೇ ಪ್ರತಿ ದಿನ 5 ಸಾವಿರ ಟೆಸ್ಟ್ ಗೆ ಆರೋಗ್ಯ ಇಲಾಖೆ ಸೂಚಿಸಿದೆ.ಈ ಹಿನ್ನೆಲೆ ರ್ಯಾಂಡಮ್ ಟೆಸ್ಟ್ ಗೆ ಬಿಬಿಎಂಪಿ ಮುಂದಾಗಿದೆ.