ರೂಪಾಂತರಿಯ ಉಪಟಳ ಹಿನ್ನೆಲೆ ಕ್ಯಾಮ್ಸ್ ಖಾಸಗಿ ಶಾಲಾ ಒಕ್ಕೂಟದಿಂದ ಜಾಗೃತಿ ಹಾಗೂ ಮನವಿ ಮಾಡಲಾಗಿದೆ.ತನ್ನ ವ್ಯಾಪ್ತಿಗೆ ಬರುವ ಶಾಲೆಗಳಲ್ಲಿ ಮಾರ್ಗಸೂಚಿ ಪಾಲನೆ ಮಾಡಲು ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಸೂಚನೆ ಕೊಟ್ಟಿದ್ದಾರೆ.
JN.1 ಬಗ್ಗೆ ಕೆಲ ಸುಳ್ಳು ಸುದ್ದಿಯನ್ನು ನಂಬಬಾರದು ಮಕ್ಕಳಲ್ಲಿ ಗಾಬರಿ ಹುಟ್ಟಿಸಬಾರದು .ಶಾಲೆಗೆ ಬರುವ ಮಕ್ಕಳ ದೇಹದ ಉಷ್ಣಾಂಶ ಪರಿಷಲನೆ ಮಾಡಬೇಕು.ಮಕ್ಕಳು ಶಾಲೆ ಎಂಟ್ರಿ ಆಗುವಾಗ ಸ್ಯಾನಿಟೈಸರ್ ಹಾಕಬೇಕು.ಶಾಲಾ ಆವರಣ ಸ್ಯಾನಿಟೈಸ್ ಮಾಡ್ತಾ ಇರಬೇಕು, ಸ್ವಚ್ಛವಾಗಿ ಇಡಬೇಕು.ಆರೋಗ್ಯ ಸಮಸ್ಯೆ ಇರುವ ಮಕ್ಕಳು ಮಾಸ್ಕ್ ಧರಿಸುವಂತೆ ಸೂಚನೆ ನೀಡಲಾಗಿದೆ.
ಶಾಲೆಗೆ ಬಂದ ಮೇಲೆ ಮಕ್ಕಳು ಹುಷಾರು ತಪ್ಪಿದ್ರೆ ತಕ್ಷಣ ಅಂತಹ ಮಕ್ಕಳ ಐಸೋಲೇಟ್ ಮಾಡಬೇಕು ಜೊತೆಗೆ ಅಂತಹ ಮಕ್ಕಳ ಪೋಷಕರ ಗಮನಕ್ಕೆ ತರಬೇಕು, ಅನಾರೋಗ್ಯದ ಮಕ್ಕಳಟೆಸ್ಟ್ ಅಥವಾ ಕ್ಲಾಸ್ ಮಿಸ್ ಆಗುತ್ತೆ ಅಂತ ಪೋಷಕರು ಮಕ್ಕಳ ಶಾಲೆಗೆ ಕಳುಹಿಸದ ಹಾಗೇ ಎಚ್ಚರ ವಹಿಸಬೇಕು.
ರಜಾ ದಿನಗಳಲ್ಲಿ ಮಕ್ಕಳ ಅತೀ ಕ್ರೌಡೆಡ್ ಜಾಗಕ್ಕೆ ಕರೆದು ಕೊಂಡು ಹೋಗೊದನ್ನ ಪೋಷಕರು ಅವಾಯ್ಡ್ ಮಾಡಬೇಕು .ಶಾಲಾ ಟ್ರಿಪ್ ಕರೆದು ಕೊಂಡು ಹೋದ್ರೆ ಅಗತ್ಯ ಮುಂಜಾಗ್ರತೆ ವಹಿಸಲೇ ಬೇಕು, ಆಕ್ಸಿಜನ್ ಕಿಟ್ ಸಮೇತ ಹೋಗಬೇಕು.ಬೇರೆ ರಾಜ್ಯ ಹಾಗೂ ದೇಶಕ್ಕೆ ಹೋಗಿ ಬಂದ ಮಕ್ಕಳ ಮೇಲೆ ಹದ್ದಿನ ಕಣ್ಣಿಡಲು ಕಾಮ್ಸ್ ಅಧ್ಯಕ್ಷ ಶಶಿಕುಮಾರ್ ಸೂಚನೆ ನೀಡಿದ್ದಾರೆ