Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕೋವಿಡ್-19 ಪರೀಕ್ಷೆ: 68 ಜನರಲ್ಲಿ ಕೊರೊನಾ ವೈರಸ್ ಇಲ್ಲ

ಕೋವಿಡ್-19 ಪರೀಕ್ಷೆ: 68 ಜನರಲ್ಲಿ ಕೊರೊನಾ ವೈರಸ್ ಇಲ್ಲ
ಬೆಂಗಳೂರು , ಮಂಗಳವಾರ, 31 ಮಾರ್ಚ್ 2020 (21:14 IST)
ಕಲಬುರಗಿ ಜಿಲ್ಲೆಯಿಂದ ಇದೂವರೆಗೆ ಕೋವಿಡ್-19 ಪರೀಕ್ಷೆಗೆ ಮೃತ ವಯೋವೃದ್ಧ ವ್ಯಕ್ತಿ ಸೇರಿದಂತೆ ಒಟ್ಟಾರೆ ಕಳುಹಿಸಲಾದ 101 ಸ್ಯಾಂಪಲ್ಸ್ ಪರೀಕ್ಷೆಗಳಲ್ಲಿ 68 ಪ್ರಕರಣಗಳಲ್ಲಿ ನೆಗೆಟಿವ್ ವರದಿ ಬಂದಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.

ಒಟ್ಟಾರೆ 101 ಪ್ರಕರಣಗಳ ಪೈಕಿ ಇದೂವರೆಗೆ 3ರಲ್ಲಿ (ಮೃತ ವ್ಯಕ್ತಿ ಸೇರಿದಂತೆ) ಪಾಸಿಟಿವ್ ಬಂದಿದೆ. 2 ಪ್ರಕರಣಗಳಲ್ಲಿ ತಾಂತ್ರಿಕ ಕಾರಣದಿಂದ ಪರೀಕ್ಷೆಯಾಗಿರುವುದಿಲ್ಲ. ಇನ್ನೂ 28 ಪ್ರಕರಣಗಳಲ್ಲಿ ವೈದ್ಯಕೀಯ ಪರೀಕ್ಷೆಯ ವರದಿ ಬರಬೇಕಿದೆ ಎಂದು ಅವರು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವ್ ಹೊಂದಿದ ವ್ಯಕ್ತಿಗಳೊಂದಿಗೆ ನೇರ ಸಂಪರ್ಕ ಹೊಂದಿರುವ 99 ಜನ ಹಾಗೂ ಎರಡನೇ ಸಂಪರ್ಕ ಹೊಂದಿರುವ 388 ಜನರನ್ನು ಗುರುತಿಸಲಾಗಿದೆ. ಇದಲ್ಲದೆ ವಿದೇಶದಿಂದ ಆಗಮಿಸಿದ 487 ಜನರನ್ನು ಸಹ ಪತ್ತೆ ಹಚ್ಚಲಾಗಿದೆ.

ಪ್ರಸ್ತುತ 206 ಜನರನ್ನು ಹೋಂ ಕ್ವಾರಂಟೈನ್‍ನಲ್ಲಿಟ್ಟು ಎಲ್ಲರ ಆರೋಗ್ಯದ ಮೇಲೆ ನಿಗಾ ವಹಿಸಿದೆ. ಇನ್ನೂ ಹೋಂ ಕ್ವಾರಂಟೈನ್ ಅವಧಿ ಮುಗಿಸಿದ 768 ಜನರನ್ನು ಸ್ವಯಂ ಆರೋಗ್ಯದ ವರದಿ ನೀಡಲು ತಿಳಿಸಲಾಗಿದೆ. ಪ್ರಸ್ತುತ ಒಟ್ಟಾರೆ 33 ಜನರು ಐಸೋಲೇಟೆಡ್ ವಾರ್ಡ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಏಪ್ರಿಲ್ 14 ತನಕ 144 ನಿಷೇಧಾಜ್ಞೆ ವಿಸ್ತರಣೆ