Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ತೆರಿಗೆ ದೋಖಾ ಮಾಡೋರ ವಿರುದ್ಧ ಪಾಲಿಕೆ ನೋಟೀಸ್ ಸಮರ

ತೆರಿಗೆ ದೋಖಾ ಮಾಡೋರ ವಿರುದ್ಧ ಪಾಲಿಕೆ ನೋಟೀಸ್ ಸಮರ
bangalore , ಬುಧವಾರ, 3 ಜನವರಿ 2024 (14:00 IST)
ಬೆಂಗಳೂರಿಗರಿಂದ ಕೋಟಿ ಕೋಟಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ವಂಚಕರ ವಿರುದ್ಧ ಬೃಹತ್ ಮಹಾನಗರ ಪಾಲಿಕೆ ಸಮರಸಾರಿದೆ.ತೆರಿಗೆ ವಸೂಲಿಗೆ ಬಿಬಿಎಂಪಿ ಹೊಸ ಪ್ಲ್ಯಾನ್ ಮಾಡಿದೆ.ಬಿಬಿಎಂಪಿಯಿಂದಲೇ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ.
 
ಬಿಬಿಎಂಪಿ ವಿಶೇಷ ಆಯುಕ್ತ ಮನೀಶ್ ಮೌದ್ಗಿಲ್ ತೆರಿಗೆ ಪಾವತಿಸದೆ ಬಾಕಿ ಉಳಿಸಿಕೊಂಡಿರೋರೇ 6 ಲಕ್ಷ ಮಂದಿ ಎಂದು ಹೇಳಿದ್ದಾರೆ.ಅದರಲ್ಲಿ 6  ಲಕ್ಷ ಜನರಿಂದ 500 ಕೋಟಿ  ತೆರಿಗೆ ಬಾಕಿ ಇದೆ.ಎಲ್ಲಾ 6 ಲಕ್ಷ ಜನರಿಗೆ ಎಚ್ಚರಿಕೆಯ SMS ರವಾನೆ ಮಾಡಲಾಗಿದೆ.SMS ನಿರ್ಲಕ್ಷ್ಯಿಸಿ ತೆರಿಗೆ ಪಾವತಿಸದಿದ್ರೆ ಆಸ್ತಿ ಜಪ್ತಿ ಮಾಡಲಾಗುತ್ತೆ.ಬಿಬಿಎಂಪಿ ಆಕ್ಟ್ 2020 ರ ಅಡಿಯಲ್ಲಿ ಶಿಸ್ತುಕ್ರಮ ಎಚ್ಚರಿಕೆ ನೀಡಲಾಗಿದೆ.

ಬರೋಬ್ಬರಿ 6 ಲಕ್ಷ ತೆರಿಗೆ  ಬಾಕಿದಾರರಿಗೆ ಎಸ್ಎಂಎಸ್  ಅಸ್ತ್ರ ಪ್ರಯೋಗ  ಮಾಡಲಾಗಿದೆ.ವರ್ಷಗಟ್ಟಲೆ ಯಿಂದ ಆಸ್ತಿ ತೆರಿಗೆ ಕಟ್ಟದೆ ಮಾಲೀಕರು ಕಳ್ಳಾಟವಾಡಿದ್ದು,ಇದೀಗ ಕೋಟಿ ಕೋಟಿ ಆಸ್ತಿಗೆ ತೆರಿಗೆ ಸಂಗ್ರಹಕ್ಕೆ ಪಾಲಿಕೆ ನಿಂತಿದೆ.ಈಗಾಗಲೇ ತೆರಿಗೆ ಕಟ್ಟದ ಕೆಲ ಮಳಿಗೆಗಳಿಗೆ ಬೀಗ ಜಡೆಯಲಾಗಿದೆ.ಇನ್ನುಳಿದವರಿಗೆ SMS ಕಳುಹಿಸಲಾಗ್ತಾಇದೆ.ಈಗ ಮಳಿಗೆಗಳು ಮಾತ್ರ ಸಿಜ್ ಮಾಡ್ಲಾಗ್ತಾಯಿದ್ದು ತೆರಿಗೆ ಪಾವತಿ ಮಾಡದಿದ್ದರೆ ಮನೆಗಳು ಸೀಜ್ ಮಾಡಲಾಗುವುದು ಎಂದು ಬಿಬಿಎಂಪಿ ವಿಶೇಷ ಆಯುಕ್ತ ಮೌನಿಷ್ ಮೌದ್ಗಿಲ್ ಹೇಳಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಮದುವೆ ಮಂಟಪದಲ್ಲೇ ವರದಕ್ಷಿಣೆಗೆ ಡಿಮ್ಯಾಂಡ್‌