ಮೊದಲ ಬಾರಿಗೆ ಈ ಜಿಲ್ಲೆಯೊಳಗಿನ ವ್ಯಕ್ತಿಗಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡು ಜನರಲ್ಲಿ ಆತಂಕ ಮೂಡಿಸಿದೆ.
ಹಾಸನ ಜಿಲ್ಲೆಯಲ್ಲಿ 14 ಜನರಲ್ಲಿ ಕೊವೀಡ್-19 ಪಾಸಿಟಿವ್ ಪ್ರಕರಣಗಳು ಕಂಡು ಬಂದಿವೆ. ಒಟ್ಟಾರೆ ಜಿಲ್ಲೆಯಲ್ಲಿ 99 ಜನರಲ್ಲಿ ಸೋಂಕು ಸಕ್ರಿಯವಾಗಿದೆ.
ನಿನ್ನೆವರೆಗೂ ಹಾಸನದ ಜನತೆ ಮುಂಬೈನಿಂದ ಬಂದು ಕ್ವಾರಂಟೈನ್ ಅಲ್ಲಿ ಇರುವವರಲ್ಲೇ ಕೊರೊನಾ ಸೋಂಕು ಕಾಣಿಸಿಕೊಂಡಿದೆ ಎಂದು ನಿಟ್ಟುಸಿರು ಬಿಟ್ಟಿದ್ದರು. ಆದರೆ ಬೆಳಿಗ್ಗೆಯಷ್ಟೇ ಹಾಸನ ನಗರದಲ್ಲಿನ ಉತ್ತರ ಬಡಾವಣೆಯ ಅರಳಿಕಟ್ಟೆ ವೃತ್ತದ ಮೊದಲ ಏರಿಯಾದ ನಿವಾಸಿಗಳಲ್ಲಿ ಕೋವಿಡ್-19 ವೈರಸ್ ಇರುವುದು ದೃಢಪಟ್ಟಿದೆ.
ಇಡೀ ಬಡಾವಣೆಯನ್ನು 28 ದಿನಗಳ ಕಾಲ ಕಂಟೈನ್ ಮೆಂಟ್ ಝೋನ್ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಘೋಷಿಸಿದ್ದಾರೆ.