Publish Date: Sun, 15 Mar 2020 (17:39 IST)
Updated Date: Sun, 15 Mar 2020 (17:44 IST)
ಕೊರೊನಾ ವೈರಸ್ ಭೀತಿಯಿಂದಾಗಿ ಇರಾನ್ ನಲ್ಲಿದ್ದ ಭಾರತೀಯರು ವಾಪಸ್ ಆಗಿದ್ದಾರೆ.
ಇರಾನ್ ನಲ್ಲಿ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಅಲ್ಲಿದ್ದ 234 ಭಾರತೀಯರನ್ನು ತಾಯ್ನಾಡಿಗೆ ಮರಳಿ ಕರೆತರಲಾಗಿದೆ ಅಂತ ವಿದೇಶಾಂಗ ಜೈಶಂಕರ್ ಹೇಳಿದ್ದಾರೆ.
131 ವಿದ್ಯಾರ್ಥಿಗಳು, 103 ಯಾತ್ರಿಕರನ್ನು ಭಾರತಕ್ಕೆ ವಾಪಸ್ ಕರೆತರಲಾಗಿದೆ. ಸದ್ಯ ಇರಾನ್ ನಲ್ಲಿ ಕೊರೊನಾ ಭೀಕರತೆ ಹೆಚ್ಚಾಗಿದ್ದು, ಅಲ್ಲಿನ ಜನರು ವಾಪಸ್ ಬಂದಿದ್ದಾರೆ. ಅದೇ ರೀತಿ ಇಟಲಿಯಲ್ಲಿದ್ದ ಭಾರತೀಯರೂ ಕೂಡ ಸುರಕ್ಷತೆ ದೃಷ್ಟಿಯಿಂದ ತಾಯ್ನಾಡಿಗೆ ಮರಳಿ ಬಂದಿದ್ದಾರೆ.