Publish Date: Sun, 15 Mar 2020 (20:26 IST)
Updated Date: Sun, 15 Mar 2020 (20:28 IST)
ಕೊರೋನಾ ವೈರಸ್ ಸೋಂಕಿನಿಂದ ಮೃತಪಟ್ಟಿದ್ದ ಕಲಬುರಗಿಯ ವಯೋವೃದ್ಧನ ಕುಟುಂಬದ 4ನೇ ಸದಸ್ಯನಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
45 ವರ್ಷದ ವ್ಯಕ್ಕಿಯ ಗಂಟಲು ದ್ರವ್ಯ ಮಾದರಿಯ ವರದಿ "ಪಾಸಿಟಿವ್" ಎಂದು ಬಂದಿದೆ ಎಂದು ಜಿಲ್ಲಾಧಿಕಾರಿ ಶರತ್. ಬಿ ಅವರು ತಿಳಿಸಿದಿದ್ದಾರೆ.
ಕುಟುಂಬದ ನಾಲ್ಕು ಜನರ ಪೈಕಿ 3 ಜನರಿಗೆ ಕೊರೋನಾ ವೈರಸ್ ಸೋಂಕು ಇಲ್ಲ ಎಂದು ಕಲಬುರಗಿಯಲ್ಲಿ ಆರೋಗ್ಯ ಸಚಿವ ಬಿ.ಶ್ರೀರಾಮಲು ಸ್ಪಷ್ಟಪಡಿಸಿದ್ದರು.
ಇನ್ನೊಬ್ಬರ ವರದಿ ಭಾನುವಾರ ಸಂಜೆ ಬರಲಿದೆ ಎಂದು ಅವರು ತಿಳಿಸಿದ್ದರು.
ಕಲಬುರಗಿಯ 76 ವರ್ಷದ ವಯೋವೃದ್ಧ ಶ್ವಾಸಕೋಶ ಕಾಯಿಲೆಯ ಜೊತೆಗೆ ಕೊರೊನಾ ವೈರಸ್ ಸೋಂಕಿನಿಂದ ಕಳೆದ ಮಾರ್ಚ್ 10 ರಂದು ನಿಧನ ಹೊಂದಿದ್ದರು. ಇದೀಗ ಅವರ ಕುಟುಂಬದ ನಾಲ್ಕನೇ ಸದಸ್ಯನಿಗೆ ಕೊರೊನಾ ವೈರಸ್ ಕಾಣಿಸಿಕೊಂಡಿದ್ದು, ಚಿಕಿತ್ಸೆ ಮುಂದುವರಿಸಲಾಗಿದೆ.