Publish Date: Fri, 10 Apr 2020 (20:13 IST)
Updated Date: Fri, 10 Apr 2020 (20:15 IST)
ಕೊರೊನಾ ಸೋಂಕಿತರನ್ನು ಕೂಡಲೇ ಡಿಸ್ಚಾರ್ಜ್ ಮಾಡಲಾಗುತ್ತದೆ ಎಂದು ಡಿಸಿ ಹೇಳಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಸದ್ಯ ಈವರೆಗೆ ಮೂರು ಕೊರೊನಾ ಪಾಸಿಟೀವ್ ಕೇಸುಗಳಿದ್ದು, ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಗುಣಮುಖರಾಗಿದ್ದಾರೆ. ಇದೀಗ ಸದ್ಯದಲ್ಲೇ ಅವರು ಆಸ್ಪತ್ರೆಯಿಂದ ಬಿಡುಗಡೆಗೊಳ್ಳಲಿದ್ದಾರೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.
ಸೋಂಕಿತರ ಸಂಪರ್ಕದಲ್ಲಿ ಇದ್ದವರಿಗೂ ನೆಗಟಿವ್ ವರದಿಗಳು ಬಂದಿದ್ದು, ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಜಿಲ್ಲೆಗೆ ಹೊರಗಡೆ ಜಿಲ್ಲೆಯಿಂದ ಯಾರೂ ಬರದಂತೆ ಗಡಿಭಾಗಗಳನ್ನ ಮುಚ್ಚಲಾಗಿದೆ. ಹೊರ ಜಿಲ್ಲೆಗಳಿಂದ ಯಾರೂ ನಮ್ಮಲ್ಲಿಗೆ ಬರಬೇಡಿ ಎಂದು ತಿಳಿಸಿದ್ದಾರೆ.