ಬೆಂಗಳೂರು : ಬೆಂಗಳೂರಿನ ಐಟಿ-ಬಿಟಿ ಕ್ಷೇತ್ರಕ್ಕೂ ಕೊರೊನಾ ಭೀತಿ ತಟ್ಟಿದ ಹಿನ್ನಲೆಯಲ್ಲಿ ಉದ್ಯೋಗಿಗಳಿಗೆ 14 ದಿನ ವೇತನ ಸಹಿತ ರಜೆ ನೀಡುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ.
ಇಕೋ ಸ್ಪೇಸ್, ಐಟಿಪಿಎಲ್ , ಮಾನ್ಯತಾ ಟೆಕ್ ಪಾರ್ಕ್ ಎಲ್ಲಾ ಟೆಕ್ ಪಾರ್ಕ್ ಗಳ ಅಭಿಪ್ರಾಯ ಸಂಗ್ರಹಿಸಿ ಬಳಿಕ ನಿರ್ಧಾರ ತೆಗೆದುಕೊಳ್ಳಲಾಗುವುದು ಎನ್ನಲಾಗಿದೆ. ಐಟಿ ಕಂಪೆನಿಗಳಿಂದ ಈ ಬಗ್ಗೆ ಈಗಾಗಲೇ 1 ಸುತ್ತಿನ ಚರ್ಚೆ ನಡೆಸಿದೆ.
ಐಟಿ ಕಂಪೆನಿಗಳು ಉದ್ಯೋಗಿಗಳಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದ್ದು, ಉದ್ಯೋಗಗಳ ವಿದೇಶ ಪ್ರಯಾಣಕ್ಕೂ ಕಂಪೆನಿಗಳಿಂದ ಬ್ರೇಕ್ ಹಾಕಲಾಗಿದೆ ಎನ್ನಲಾಗಿದೆ.