ಗುಜರಾತಿನ ಅಹಮದಾಬಾದ್ ನಗರದಿಂದ ಧಾರವಾಡ ಜಿಲ್ಲೆಗೆ ಆಗಮಿಸಿರುವ 9 ಜನರಲ್ಲಿ ಕೋವಿಡ್ -19 ಪಾಸಿಟಿವ್ ವರದಿಯಾಗಿದೆ.
ಗುಜರಾತಿನಿಂದ ಆಗಮಿಸಿದ ಈ ಎಲ್ಲಾ ವ್ಯಕ್ತಿಗಳನ್ನು ಧಾರವಾಡ ಜಿಲ್ಲೆಯ ಆಗಮನ ಕೇಂದ್ರದಲ್ಲಿ ನೋಂದಣಿ ಮಾಡಿಕೊಂಡು ಪ್ರತ್ಯೇಕವಾಗಿ ಇರಿಸಲಾಗಿತ್ತು. ಬಂದ ಕೂಡಲೇ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದೀಗ ಸೋಂಕು ದೃಢಪಟ್ಟಿರುವದರಿಂದ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.
ಈ ಎಲ್ಲಾ ಒಂಬತ್ತು ಜನ ಪುರುಷರಲ್ಲಿ ಕೋವಿಡ್ ಸೋಂಕು ದೃಢಪಟ್ಟಿರುವದರಿಂದ ಜಿಲ್ಲೆಯಲ್ಲಿ ಇದುವರೆಗೆ ಪ್ರಕರಣಗಳ ಸಂಖ್ಯೆ 21 ಕ್ಕೆ ಏರಿಕೆಯಾದಂತಾಗಿದೆ. ಈಗಾಗಲೇ 7 ಜನರು ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.