Publish Date: Mon, 11 May 2020 (22:39 IST)
Updated Date: Mon, 11 May 2020 (22:41 IST)
ಕೊರೊನಾ ವೈರಸ್ ಇದೀಗ ಅತ್ಯಾಚಾರಕ್ಕೆ ಒಳಗಾಗಿರುವ ಮಹಿಳೆಯೊಬ್ಬರಲ್ಲಿ ಕಾಣಿಸಿಕೊಂಡಿದೆ.
ಮಹಿಳೆಯನ್ನು ನಿಗದಿತ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆದರೆ ಅತ್ಯಾಚಾರ ಆರೋಪಿ ಇರುವ ಜೈಲಿನಲ್ಲಿ ಕೊರೊನಾ ವೈರಸ್ ಭೀತಿ ಮನೆಮಾಡಿದ್ದು, ಖೈದಿಗಳು ಹಾಗೂ ಆರೋಪಿಗಳು ಆತಂಕದಲ್ಲಿದ್ದಾರೆ.
ಅತ್ಯಾಚಾರಕ್ಕೆ ಒಳಗಾಗಿ ಸಂತ್ರಸ್ತೆಯಾಗಿರುವ ಮಹಿಳೆಯಲ್ಲಿ ಕೊರೊನಾ ಟೆಸ್ಟ್ ವರದಿ ಪಾಸಿಟಿವ್ ಬಂದಿದೆ.
ಇದರಿಂದ ಎಚ್ಚೆತ್ತುಕೊಂಡ ತಿಹಾರ್ ಜೈಲಿನ ಸಿಬ್ಬಂದಿಗಳು ಜೈಲಿನಲ್ಲಿರುವ ಆರೋಪಿ ಹಾಗೂ ಆತನ ಸಂಪರ್ಕದಲ್ಲಿರುವವರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿದೆ.