Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನಿರಾಶ್ರಿತರ ಮೇಲೆ ಕಣ್ಣು ಇಡಿ ಎಂದ ಡಿಸಿಎಂ

ನಿರಾಶ್ರಿತರ ಮೇಲೆ ಕಣ್ಣು ಇಡಿ ಎಂದ ಡಿಸಿಎಂ
ಬೆಂಗಳೂರು , ಸೋಮವಾರ, 11 ಮೇ 2020 (21:22 IST)
ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ  ನಿರಾಶ್ರಿತರ  ಮೇಲೆ ಹೆಚ್ಚಿನ ಕಣ್ಣು ಇಡಬೇಕು.

ಕೊರೊನಾ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು  ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ಸೂಚಿಸಿದರು.

ಬೆಂಗಳೂರಿನಲ್ಲಿರುವ ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಭೇಟಿ ಪರಿಶೀಲನೆ ನಡೆಸಿದ ನಂತರ  ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಈ ಕೇಂದ್ರದಲ್ಲಿ 672  ನಿರಾಶ್ರಿತರಿದ್ದಾರೆ.‌ ನಿರಾಶ್ರಿತರಿಗೆ ಮಾಸ್ಕ್ ಹಾಗೂ ಸ್ಯಾನಿಟೈಜರ್ ನೀಡುವುದಷ್ಟೇ ಅಲ್ಲದೇ ಅವರು ಬಳಸುವಂತೆ‌ ಮನವರಿಕೆ ಮಾಡಿಕೊಡಬೇಕು.

ಮಾರ್ಚ್ 2 ನೇ ವಾರದಿಂದಲೇ ಈ‌ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಲಾಕ್ ಡೌನ್ ಮಾಡಿ,   ಪ್ರವೇಶವನ್ನು ನಿಷೇಧಿಸಿ, ಯಾರಿಗೂ ಹೊಸದಾಗಿ ದಾಖಲು ಮಾಡಿಕೊಂಡಿಲ್ಲ. ಅಲ್ಲದೇ ಸಾರ್ವಜನಿಕರಿಗೂ ಪ್ರವೇಶ ನೀಡಿಲ್ಲ. ಮುಂಜಾಗ್ರತಾ ಕ್ರಮಕೈಗೊಂಡಿದ್ದರಿಂದ ಈ ಕೇಂದ್ರದಲ್ಲಿ ಯಾರಿಗೂ ಕೊರೊನಾ ಸೋಂಕು ಕಾಣಿಸಿಕೊಂಡಿಲ್ಲ ಎಂದರು.  



Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾ ಇಲ್ಲದ ಜಿಲ್ಲೆಗೆ ಗೋವಾದಿಂದ ಬಂದವರೆಷ್ಟು?