ಡಿಕೆಶಿ ಓಲೈಕೆ ರಾಜಕಾರಣ ಬಿಟ್ಟು, ದೇಶದ ಭದ್ರತೆ ಬಗ್ಗೆ ಆಲೋಚಿಸಲಿ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.ಕುಕ್ಕರ್ ಬ್ಲಾಸ್ಟ್ ಪ್ರಕರಣದ ಡಿಕೆಶಿವಕುಮಾರ್ ಹೇಳಿಕೆ ವಿಚಾರವಾಗಿ ಮಾತನಾಡಿ ಡಿ ಕೆ ಶಿವಕುಮಾರ್ ಅವರ ಹೇಳಿಕೆ ಮಾದ್ಯಮದಲ್ಲಿ ನೋಡಿ ತುಂಬಾ ನೋವಾಗಿದೆ .ಜವಾಬ್ದಾರಿ ಸ್ಥಾನದಲ್ಲಿ ಇರುವವರು ಈ ರೀತಿ ಹೇಳಿಕೆ ನೀಡಬಾರದು. ಇದನ್ನ ಖಂಡಿಸ್ತೇನೆ.ಇದು ದೇಶದ ಆಂತರಿಕ ಭದ್ರತೆ ವಿಚಾರ.ಹಿಂದೆ ಇವರ ಕಾಲದಲ್ಲಿ ಪಟಾಕಿ ಹಬ್ಬದ ರೀತಿ ಬಾಂಬ್ ಹೊಡಿತಿದ್ರು.ಮೋದಿ ಬಂದ ಬಳಿಕ ಪೊಲೀಸ್ ಭದ್ರೆತೆ ಹೆಚ್ಚು ಮಾಡಿದ್ದಾರೆ.ಇದನ್ನ ನಿಯಂತ್ರಣ ಮಾಡಿ ಭಯೋತ್ಪಾದನೆ ನಿಗ್ರಹ ನಮ್ಮ ಪೊಲೀಸರನ್ನ ಡಿ ಮಾರಲೈಸ್ ಮಾಡುವ ಕೆಲಸ ಮಾಡ್ತಿದ್ದಾರೆ. ಅಲ್ಪ ಸಂಖ್ಯಾತರ ಓಟಿಗಾಗಿ ಓಲೈಕೆ ರಾಜಕಾರಣ ಮಾಡ್ತಿದ್ದಾರೆ. ಡಿಕೆಶಿ ಓಲೈಕೆ ರಾಜಕಾರಣ ಬಿಟ್ಟು, ದೇಶದ ಭದ್ರತೆ ಬಗ್ಗೆ ಆಲೋಚಿಸಲಿ ಎಂದು ಕಿಡಿಕಾರಿದರು. ಇನ್ನೂ ಕಂದಾಯ ಸಚಿವ ಆರ್ ಅಶೋಕ್ ಮಾತನಾಡಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮೊದಲು ರಾಜ್ಯದ ಜನರಲ್ಲಿ ಕ್ಷಮೆ ಕೇಳಬೇಕು,ರಾಷ್ಟ್ರದ ಭದ್ರತೆ ಪ್ರಶ್ನೆ ಬಂದಾಗ ಏಕತೆಯ ಪ್ರದರ್ಶನ ಮಾಡಬೇಕು.ದೇಶದ ಗಡಿಯಲ್ಲಿ ಯೋಧರು ಪ್ರಾಣದ ಹಂಗು ತೊರೆದು ರಕ್ಷಣೆ ಮಾಡ್ತಿದ್ದಾರೆ.ಟೆರರಿಸ್ಟ್ ಆದಾಗ ಬಹಳ ಅನುಕಂಪದಿಂದ ಮಾತಾಡಬಾರದು ಬಾಂಬ್ ಬ್ಲಾಸ್ಟ್ ಆದಾಗ ಪಕ್ಷತೀತವಾಗಿ ಒಟ್ಟಾಗಿ ನಿಲ್ಲಬೇಕು. ಕಾಂಗ್ರೆಸ್ ನವರಿಗೆ ಮುಸ್ಲಿಂ ಭಯೋತ್ಪಾದಕರೆಲ್ಲರು ದೇವಲೋಕದಿಂದ ಬಂದ ದೇವತೆಗಳು ಕಾಣ್ತಾರೆ ಎಂದು ಡಿಕೆಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.