Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸರಕಾರದ ವಿದ್ಯುತ್ ಚಾಲಿತ ಬೈಕ್ ಟ್ಯಾಕ್ಸಿ ಯೋಜನೆಗೆ ಮುಂದುವರೆದ ವಿರೋಧ

ಸರಕಾರದ ವಿದ್ಯುತ್ ಚಾಲಿತ ಬೈಕ್ ಟ್ಯಾಕ್ಸಿ ಯೋಜನೆಗೆ ಮುಂದುವರೆದ ವಿರೋಧ
bangalore , ಶುಕ್ರವಾರ, 23 ಜುಲೈ 2021 (20:45 IST)
ಬೆಂಗಳೂರು: ವಿದ್ಯುತ್ ಚಾಲಿತ ಬೈಕ್ ಟ್ಯಾಕ್ಸಿ ಚಾಲನೆಗೆ ಸರ್ಕಾರದಿಂದ ಗ್ರೀನ್ ಸಿಗ್ನಲ್ ಹಿನ್ನಲೆಯಲ್ಲಿ ನಮ್ಮ ಚಾಲಕರ ಟ್ರೇಡ್ ಯೂನಿಯನ್ ಅಧ್ಯಕ್ಷ ಸೋಮಶೇಖರ್ ಗೌಡ ಈಟಿವಿ ಭಾರತದ ಮೂಲಕ ಮನವಿ ಮಾಡಿದ್ದಾರೆ 
 
ಜುಲೈ 14 ರಂದು ಕರ್ನಾಟಕ ಸರ್ಕಾರದಿಂದ ಅಧಿಸೂಚನೆ ಹೊರಡಿಸಲಾಗಿದ್ದು, ವಿದ್ಯುತ್ ಚಾಲಿತ ಬೈಕ್ ಟ್ಯಾಕ್ಸಿ ಯೋಜನೆಗೆ ಚಾಲ್ತಿ ನೀಡಿದ್ದಾರೆ.ಈ ಯೋಜನೆ ಜಾರಿಗೆ ಬಂದಲ್ಲಿ ಆಟೋ, ಟ್ಯಾಕ್ಸಿ ಚಾಲಕರ ಜೀವನದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗುತ್ತದೆ. 
ಸಂಪಾದನೆ ಇಲ್ಲದೇ ಸಾಯುವ ಪರಿಸ್ಥಿತಿ ಬರುತ್ತದೆ ಹಾಗಾಗಿ ಈ ಯೋಜನೆ ಜಾರಿಯಾಗಬಾರದು ಎಂದು ಒತ್ತಾಯಿಸಿದ್ದಾರೆ. 
 
ಈ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿ, ರಾಜ್ಯಪಾಲರು, ಮುಖ್ಯಮಂತ್ರಿ, ಸಾರಿಗೆ  ಸಚಿವರ ಹಾಗೂ ಇಲಾಖೆ ಆಯುಕ್ತರಿಗೆ ಮನವಿ ಕೊಟ್ಟಿದ್ದೇವೆ, ಯಾವುದೇ ಕಾರಣಕ್ಕೂ ಬೈಕ್ ಟ್ಯಾಕ್ಸಿ ಯೋಜನೆಗೆ ಅವಕಾಶ ಕೊಡಬಾರದು, ಆದೇಶ ಹಿಂಪಡೆಯುವಂತೆ ಒತ್ತಾಯಿಸಿದ್ದೇವೆ. ಲಕ್ಷಾಂತರ ಟ್ಯಾಕ್ಸಿ ಆಟೋ ಚಾಲಕರು ಬದುಕಿಗೆ ಅನುಕೂಲಕರ ವ್ಯವಸ್ಥೆ ಮಾಡಿಕೊಡಬೇಕೆಂದು ತೆರಿಗೆ ಕಟ್ಟುವ ಖಾಸಗಿ ವಾಣಿಜ್ಯ ಚಾಲಕರ ಹೊಟ್ಟೆ ಮೇಲೆ ಹೊಡೆಯಬೇಡಿ, ನಮ್ಮ ಚಾಲಕರು ಟ್ರೇಡ್ ಯೂನಿಯನ್ ಸಂಸ್ಥಾಪಕ ಸೋಮಶೇಖರ್ ವಿನಂತಿಸಿದ್ದಾರೆ.
 
ಇದೇ 14 ರಂದು ಸರ್ಕಾರ ವಿದ್ಯುತ್ ಚಾಲಿತ ಬೈಕ್ ಟ್ಯಾಕ್ಸಿ ಚಾಲ್ತಿಗೆ  ಅಧಿಸೂಚನೆ ಹೊರಡಿಸಿರುವುದು ಸಾಕಷ್ಟು ಚಾಲಕರು ಮಾಲೀಕರ ವಿರೋಧಕ್ಕೆ ಕಾರಣವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮುಂಜಾಗೃತಾ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಸಿಎಂ ಸೂಚನೆ