Publish Date: Mon, 27 Feb 2023 (19:40 IST)
Updated Date: Mon, 27 Feb 2023 (19:42 IST)
ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ಸಭೆಗಳ ಮೇಲೆ ಸಭೆ ಆಯೋಜನೆ ಮಾಡುತ್ತಿದೆ. ಈದರ ಭಾಗವಾಗಿ ನಾಳೆ ಪ್ರಚಾರ ಸಮಿತಿ ವತಿಯಿಂದ ಕೆಪಿಸಿಸಿ ಕಚೇರಿಯಲ್ಲಿ ಮಧ್ಯಾಹ್ನ 3 ಗಂಟೆಗೆ ಸಭೆ ಆಯೋಜನೆ ಮಾಡಿದೆ. ವಿಧಾನಸಭೆಯ ಚುನಾವಣೆಯಲ್ಲಿ ಯಾವೇಲ್ಲ ವಿಚಾರಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಬೇಕು, ಪಕ್ಷ ಘೋಷಣೆ ಮಾಡಿರುವ ಯೋಜನೆಗಳನ್ನು ಯಾವ ರೀತಿ ರಾಜ್ಯದ ಜನರಿಗೆ ತಲುಪಿಸಿಬೇಕು.ಇನ್ನೂ ಪಕ್ಷದ ಅಧ್ಯಕ್ಷರ ಅನುಮತಿ ಮೇರಿಗೆ ಹಲವು ವಿಚಾರ ಬಗ್ಗೆ ಪ್ರಚಾರ ಮಾಡಬೇಕು.ಹಾಗೂ ಪಕ್ಷವನ್ನ ಅಧಿಕಾರಕ್ಕೆ ತರುವುದಕ್ಕೆ ಯಾವ ರೀತಿ ಕಾರ್ಯ ನಿರ್ವಹಿಸಬೇಕು ಸೇರಿದಂತೆ ಅನೇಕ ವಿಚಾರಗಳನ್ನು ಚರ್ಚೆ ಮಾಡಲು ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ನೇತೃತ್ವದಲ್ಲಿ ಸಭೆ ನಡೆಯಲಿದೆ. ಸಭೆಗೆ ರಾಜ್ಯ ಸಹ ಅಧ್ಯಕ್ಷರು, ಸಂಯೋಜರು ,ಜಿಲ್ಲಾಧ್ಯಕ್ಷರು ಪ್ರಚಾರ ಸಮಿತಿ ಸಂಯೋಜಕರು ಭಾಗಿ ಆಗಲಿದ್ದಾರೆ.