ಮೂರನೇ ಪಟ್ಟಿ ಬಿಡುಗಡೆ ಮಾಡಲು ಕಾಂಗ್ರೆಸ್ ನಾಯಕರು ಕಸರತ್ತು ನಡೆಸಿದ್ದು,ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಎಲೆಕ್ಷನ್ ಕಮೀಟಿ ಸಭೆ ಮಾಡಿದ್ದಾರೆ.ಈ ಸಭೆಯಲ್ಲಿ ಉಳಿದ 58 ಕ್ಷೇತ್ರಗಳ ಬಗ್ಗೆ ಸಮಗ್ರವಾಗಿ ಚರ್ಚೆ ನಡೆಸಿದ್ದು,ಸೂಕ್ತ ಅಭ್ಯರ್ಥಿಗಳನ್ನು ಪೈನಲ್ ಮಾಡಿದ್ದಾರೆ. ಮೂರನೇ ಪಟ್ಟಿಯಲ್ಲಿ 18-20 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನ ಬಿಡುಗಡೆಗೆ ಮಾಡಲಿದ್ದು,ಈ ಪಟ್ಟಿಯನ್ನ ಬಿಜೆಪಿ ಪಟ್ಟಿ ಬಿಡುಗಡೆ ನಂತರ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಪಟ್ಟಿಯನ್ನ ಬಿಡುಗಡೆ ಮಾಡಲಿದೆ ಎಂದು ಹೇಳಲಾಗುತ್ತಿದೆ.ಬಿಜೆಪಿ ನಾಯಕರಲ್ಲಿಯ ಅಸಮಧಾನವನ್ನ ಕೈ ನಾಯಕರು ಲಾಭ ಮಾಡಿ ಕೊಳ್ಳಲು ಸಿದ್ದವಾಗಿದ್ದು,ಈ ಕಾರಣದಿಂದಲೆ ಮೂರನೇ ಪಟ್ಟಿ ಕೈ ಪಾಳ್ಯ ವಿಳಂಬ ಮಾಡುತ್ತಿದೆ ಎಂದು ಹೇಳಲಾಗಿದೆ.