Publish Date: Sat, 11 Jul 2020 (16:20 IST)
Updated Date: Sat, 11 Jul 2020 (16:22 IST)
ಕಾಂಗ್ರೆಸ್ ನಾಯಕರು ಈ ಹಿಂದೆ ಮಾಡಿರುವ ಹಗರಣಗಳನ್ನು ಹೊರಗೆ ಹಾಕಬೇಕಾಗುತ್ತದೆ.
ಹೀಗಂತ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಖಡಕ್ ಎಚ್ಚರಿಕೆ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ.
ಅವರ ಸರಕಾರ ಇದ್ದಾಗ ಹಗರಣಗಳನ್ನು ಮಾಡಿ ಕಾಂಗ್ರೆಸ್ ನವರಿಗೆ ಅಭ್ಯಾಸವಾದಂತಾಗಿದೆ. ಹೀಗಾಗಿ ಇದೀಗ ಪಿಪಿಇ ಕಿಟ್ ಖರೀದಿಯಲ್ಲಿ ಹಗರಣ ನಡೆದಿದೆ ಎಂದು ಸುಳ್ಳು ಸುದ್ದಿ ಹರಡಿಸುತ್ತಿದ್ದಾರೆ ಎಂದು ಟೀಕೆ ಮಾಡಿದ್ದಾರೆ.
ಎಲ್ಲೆಲ್ಲಿ ಯಾರು ಯಾರು ಲೂಟಿ ಮಾಡಿದ್ದಾರೆ ಅನ್ನೋದು ನನಗೂ ಗೊತ್ತಿದೆ. ಈಗ ಅದನ್ನು ಹೊರಗೆ ಹಾಕಬೇಕಾಗುತ್ತದೆ ಎಂದು ಖಡಕ್ ಆಗಿ ಸಚಿವ ಸುಧಾಕರ್ ಗುಡುಗಿದ್ದಾರೆ.