Publish Date: Thu, 18 Jul 2019 (17:43 IST)
Updated Date: Thu, 18 Jul 2019 (17:45 IST)
ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಕುರಿತು ಕಾವೇರಿದ ಚರ್ಚೆ ನಡೆಯುತ್ತಿರೋವಾಗಲೇ ಕಾಂಗ್ರೆಸ್ – ಬಿಜೆಪಿಯ ವಿರುದ್ಧ ತಿರುಗಿ ಬಿದ್ದಿದೆ.
ಕಾಂಗ್ರೆಸ್ ಶಾಸಕರನ್ನು ಬಿಜೆಪಿಯವರು ಕಿಡ್ನಾಪ್ ಮಾಡುತ್ತಿದ್ದಾರೆ. ಹೀಗಂತ ಸಚಿವ ಡಿ.ಕೆ.ಶಿವಕುಮಾರ್ ಆರೋಪ ಮಾಡಿದ್ದಾರೆ.
ಕಾಂಗ್ರೆಸ್ ಶಾಸಕ ಶ್ರೀಮಂತ ಪಾಟೀಲ್ ಅವರನ್ನು ಬಿಜೆಪಿಯವರು ಅಪಹರಿಸಿದ್ದಾರೆ ಎಂದ ಅವರು, ಕೆಲವು ದಾಖಲೆಗಳನ್ನು ಸದನದಲ್ಲಿ ಪ್ರದರ್ಶನ ಮಾಡಿದ್ರು.
ಕಾಂಗ್ರೆಸ್ ಶಾಸಕರ ಜೊತೆ ಬಿಜೆಪಿಯ ಲಕ್ಷ್ಮಣ್ ಸವದಿ ಇದ್ದಾರೆಂದು ವಿಮಾನಯಾನದ ಟಿಕೆಟ್ ನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನೀಡಿದರು.
ಕಾಂಗ್ರೆಸ್ ಶಾಸಕರನ್ನು ಬಿಜೆಪಿಯವರು ಕಿಡ್ನಾಪ್ ಮಾಡುತ್ತಿದ್ದು, ನಮಗೆ ರಕ್ಷಣೆ ಕೊಡಬೇಕೆಂದು ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರು ಸ್ಪೀಕರ್ ಅವರಿಗೆ ಮನವಿ ಮಾಡಿದ್ರು.
Jagadeesh
Publish Date: Thu, 18 Jul 2019 (17:43 IST)
Updated Date: Thu, 18 Jul 2019 (17:45 IST)