Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಇಂಥ ಟೈಮ್ ನಲ್ಲಿ Mood ಮರೆತುಬಿಡಿ

ಇಂಥ ಟೈಮ್ ನಲ್ಲಿ Mood ಮರೆತುಬಿಡಿ
ಬೆಂಗಳೂರು , ಗುರುವಾರ, 18 ಜುಲೈ 2019 (16:31 IST)
ಸಂಭೋಗವೆನ್ನುವುದು ಅತ್ಯಂತ ಸಂತಸದಿಂದ ಗಂಡು ಹೆಣ್ಣುಗಳೆರಡು ಬಾಳಿನ ಸಾಮರಸ್ಯ ಕಾಯ್ದುಕೊಳ್ಳಲು ಕಳೆಯುವ ಕಾಲ. ಅಲ್ಲಿ ಇಬ್ಬರಲ್ಲಿಯೂ ಸಂಭೋಗಕ್ಕೆ ಸಮ್ಮತವಿರಬೇಕು. ಮಿಲನ ಮಹೋತ್ಸವವೆಂಬುದು ಬಲವಂತದ ಮಾಘಸ್ನಾನವಾಗಬಾರದು. ಎರಡು ದೇಹಗಳು ಒಂದಾಗುವ ಭರದಲ್ಲಿ ಬದುಕೇ ಛಿದ್ರವಾಗಬಾರದು.

ಗಂಡ ಹೆಂಡಿರಿಬ್ಬರು ಸಂಭೋಗಕ್ಕೆ ಇಳಿಯಲೇಬಾರದಾಗ  ಕಾರಣಗಳೂ ಇವೆ.

ಪ್ರಣಯ ಪಲ್ಲವಿಸುವ ಹೊತ್ತಿನಲ್ಲಿ ಎರಡು ಮನಸುಗಳು ಸಂಭೋಗಕ್ಕಾಗಿ ಶ್ರುತಿಗೊಂಡಿರಬೇಕು. ಬಲವಂತವಾಗಿಯಾದರೂ ಸರಿ ಸಂಭೋಗ ನಡೆಸದಿರುವುದೇ ಲೇಸು.

ಗಾಯವಾಗಿದ್ದಾಗ ಸಂಭೋಗಕ್ಕೆ ಸಹಕರಿಸದಾದಾಗ ಪರಸ್ಪರ ಮಾತನಾಡಿಕೊಂಡು ಪ್ರಣಯಕೇಳಿಯನ್ನು ಮುಂದೂಡುವುದು ಒಳಿತು.  

ದುಃಖದಲ್ಲಿರುವವರನ್ನು ಅವರಷ್ಟಕ್ಕೆ ಅವರನ್ನು ಬಿಡಬೇಕು.

ಹೆಣ್ಣಿಗೆ ಕಾಮಕೇಳಿಯಲ್ಲಿ ಎಳ್ಳಷ್ಟೂ ಮನಸ್ಸಿಲ್ಲದಿದ್ದರೂ ಬಲವಂತವಾಗಿ ಸಂಭೋಗಕ್ಕೆ ಎಳೆಯುವುದು ಅತ್ಯಾಚಾರಕ್ಕೆ ಸರಿಸಮ.

ಬಲವಂತಗಾಗಿ ಸರಸ ಆಡಿದರೆ ಅದು ದೇಹಕ್ಕೆ ಮಾತ್ರ ಗಾಯವಾಗುವ ಸಾಧ್ಯತೆ ಇರುವುದಿಲ್ಲ, ಮನಸ್ಸಿಗೂ ಮಾಯದ ಗಾಯವಾಗುವ ಸಾಧ್ಯತೆ ಇರುತ್ತದೆ.



Share this Story:

Follow Webdunia kannada

ಮುಂದಿನ ಸುದ್ದಿ

ಮದುವೆಗೆ ಮೊದಲೇ ನನಗೆ ಕಾಡುತ್ತಿದೆ ಈ ಭಯ!