Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಅಮೆರಿಕದಲ್ಲಿ (ನಾವು ವಿಶ್ವ ಕನ್ನಡಿಗರು) ಸಂಸ್ಥೆ ಹಾಗೂ ಕೀನ್ಯಾ ದೇಶದ ಕನ್ನಡ ಸಾಂಸ್ಕೃತಿಕ ಸಂಘ ಜಂಟಿಯಾಗಿ ನಾವಿಕೋತ್ಸವವನ್ನು ನೈರೋಬಿಯ ಜೈನ್ ಭವನದಲ್ಲಿ ಶುಕ್ರವಾರ ಸಂಜೆ ಪ್ರಾರಂಭವಾಯಿತು..
ಮನೋಮೂರ್ತಿಯವರ ಸಾರಥ್ಯದಲ್ಲಿ ನಡೆಯುತ್ತಿರುವ ಮ್ಯೂಸಿಕಲ್ ನೈಟ್ ನಲ್ಲಿ ಪ್ರಖ್ಯಾತ ಗಾಯಕರಾದ ಹೇಮಂತ್ ಕುಮಾರ್, ಚಿನ್ಮಯ್ ಅತ್ರೆಯಸ್, ಮಾನಸ ಹೊಳ್ಳ, ಅನುರಾಧ ಭಟ್ ಮತ್ತು ಚೇತನ್ ಸೊಸ್ಕಾ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಸಿಹಿ ಕಹಿ ಚಂದ್ರು ಅವರ ನೇತೃತ್ವದಲ್ಲಿ ಬೆಂಗಳೂರಿನಿಂದ ಬರುತ್ತಿರುವ ಅಡುಗೆಭಟ್ಟರಿಂದ 'ಬೊಂಬಾಟ್ ಭೋಜನ' ನಡೆಯುತ್ತಿದೆ.
ಕನ್ನಡಾಭಿಮಾನಿಗಳೆಲ್ಲಾ ಒಂದೇ ಸೂರಿನಡಿ ಸೇರಿ ಬೃಹತ್ ಸಮಾವೇಶವನ್ನು ಮಾಡುತ್ತಿರುವುದು ರೋಮಾಂಚನ ತರಿಸುತ್ತಿದೆ. ವಿವಿಧ ದೇಶಗಳಿಂದ ಆಗಮಿಸುತ್ತಿರುವ ಕನ್ನಡಿಗರಿಗೆ ವಸತಿ, ಊಟ, ವಿಹಾರ, ಮನೋರಂಜನೆ ಸೇರಿದಂತೆ ಸಕಲ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ..