ವಿರೋಧ ಪಕ್ಷ ಸ್ಥಾನದಲ್ಲಿದ್ದಾಗ ಕಾಂಗ್ರೆಸ್ ಬಿಜೆಪಿ ಸರ್ಕಾರದ ವಿರುದ್ಧ ಹಲವು ಆರೋಪ ಮಾಡಿದ್ರು..ಬಿದಿಗಿಳಿದು ಪ್ರತಿಭಟನೆ ಮಾಡಿದ್ರು..ಸರ್ಕಾರ ಬಂದ್ರೆ ಮರು ತನಿಖೆ ಮಾಡಿಸುತ್ತೇವೆ ಎಂದು ಹೇಳಿದ್ರು ಅಸರಂತೆ ತನಿಖೆಗೆ ಕೊಟ್ಟಿದ್ದಾರೆ.ಅಧಿಕಾರಕ್ಕಿಂತ ಮುಂಚೆ ಹೇಳಿದ ಗಾಗೇ ನ್ಯಾಯಾಂಗ ತನಿಖೆ ಗೆ ಈಗಾಗಲೇ 40% ಗುತ್ತಿಗೆದಾರರ ಆರೋಪವನ್ನ ನಿವೃತ್ತ ನ್ಯಾಯ ಮೂರ್ತಿ ನಾಗಮೊಹನದಾಸ್ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ಕೊಟ್ಟಿದ್ದಾರೆ.ಇನ್ನೂ ಕೋವಿಡ್ ಕಾಲದಲ್ಲಿನ ಹಗರಣಗಳ ತನಿಖೆಗೆ ಹೈಕೋರ್ಟ್ ನಿವೃತ್ತ ನ್ಯಾ.ಜಾನ್ ಮೈಕಲ್ ಕುನ್ಹಾ ನೇತೃತ್ವದಲ್ಲಿ ತನಿಖೆಗೆ ಸರ್ಕಾರ ಆದೇಶ ಮಾಡಿದೆ ಈ ಹಿನ್ನಲೆ ಮಾಜಿ ಸಚಿವ ಸುಧಾಕರ್ ಮಾತನಾಡಿ ಸರ್ಕಾರ ತನಿಖೆ ವಹಿಸಿದೆ ಸ್ವಾಗತ ಮಾಡುತ್ತೇನೆ.ತನಿಖೆಯಿಂದ ಸತ್ಯ ಹೊರಗೆ ಬರುತ್ತದೆ.ಆದರೆ ಈ ನಡೆ ನೊಡಿದ್ರೆ ರಾಜಕೀಯ ದ್ವೇಷಕ್ಕಾಗಿ ಈಗ ತನಿಖೆಗೆ ನೀಡಿದ್ದಾರೆ.ನೀವು ಸತ್ಯ ವಂತ್ರು 2013 ರದ್ದು ತನಿಖೆ ಮಾಡಿಸಿ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ರು.
ಇನ್ನೂ ಹಲವು ಪ್ರಕರಣಗಳ ತನಿಖೆ ವಿಚಾರವಾಗಿ ಮಾತನಾಡಿದ ಡಿಸಿಎಂ ಡಿಕೆಶಿವಕುಮಾರ್ ಹಿಂದೆ ನಾವು ಸಾಕಷ್ಟು ಆರೋಪ ಮಾಡಿದ್ವಿ.ರಮೇಶ್ ಜಾರಕಿಹೊಳಿ, ಆರ್.ಡಿ.ಪಿ ಆರ್ ಮಂತ್ರಿಗಳಾಗಿದ್ರು.ಅವರು ಹಾಕಿಕೊಟ್ಟ ದಾರಿಯನ್ನೇ ನಾವು ಫಾಲೋ ಮಾಡುತ್ತಿದ್ದೇವೆ. ಸಂತೋಷ್ ಪಾಟೀಲ್ ವಿಚಾರವಾಗಿ ತನಿಖೆ ಮಾಡುವಂತೆ ಅವರ ಮನೆಯವರು ಮನವಿ ಮಾಡಿದ್ರು. ತನಿಖೆ ನಡೆಯೋ ಮೊದಲೇ ದೋಷಮುಕ್ತರಾಗಿ ಬರ್ತಾರೆ ಅಂತ ಅವರೇ ಹೇಳಿಕೊಂಡಿದ್ರು. ಇನ್ವೆಸ್ಟಿಗೇಷನ್ ಟೀಮ್ ದಿಕ್ಕು ತಪ್ಪಿಸಿದ್ರು.ಅದೇ ದಾರಿ ನಮಗೆ ತೋರಿಸಿದ್ದಾರೆ. ಸಮಾಜ ಏನು ಒಪ್ಪಿದೆ ನಾವು ಅದನ್ನ ಮಾಡ್ತಿದ್ದೇವೆ. ನೀವು ಕ್ಲೀನ್ ಇದ್ದಾಗ ಭಯ ಯಾಕೆ.?.ನಮ್ಮ ಮೇಲೆ ಆರೋಪ ಮಾಡಲಿಲ್ಲವಾ.? ಇನ್ನೂ ತೆಗೀಬೇಕಾ... ಬೆಂಗಳೂರು ಸುತ್ತ ಮುತ್ತಲಿನ ಪಟ್ಟಿ ತೆಗೀಬೇಕಾ ಎಂದು ಬಿಜೆಪಿ ಹಾಗೂ ಜೆಡಿಎಸ್ ಶಾಸಕರಿಗೆ ವಾರ್ನಿಂಗ್ ನೀಡಿದಂತೆ ಡಿಕೆಶಿವಕುಮಾರ್ ಹೇಳಿಕೆ ಕಂಡು ಬಂತು.
ಒಂದು ಕಡೆ ಬಿಜೆಪಿ ಹಲವು ನಾಯಕರನ್ನ ಡಿಕೆಶಿವಕುಮಾರ್ ಕಾಂಗ್ರೆಸ್ ನತ್ತ ಸೆಳುದುಕೊಳ್ಳಯತ್ತಿದ್ದಾರೆ.ಇನ್ನೊಂದು ಕಡೆ ಹಿಂದಿನ ಸರ್ಕಾರದಲ್ಲಿನ ಹಗರಣಗಳನ್ನ ನ್ಯಾಯಾಂಗ ತನಿಖೆಗೆ ನೀಡಿದ್ದಾರೆ.ಈ ಹಿನ್ನಲೆ ವಿರೋಧ ಪಕ್ಷದಲ್ಲಿರುವ ಬಂದ ಬಿಜೆಪಿ ನಾಯಕರಿಗೆ ನಡುಕ ಶುರು ಆದಂತಾಗಿದೆ.ಆದರೆ ಈ ತನಿಖೆಗಳು ನ್ಯಾಯುತವಾಗಿ ಆಗ್ತಾವಾ ಅಥವಾ ಕಾಗದಕ್ಕೆ ಸೀಮಿತ ಆಗ್ತಾವಾ ಎಂಬುದನ್ನ ಕಾದು ನೋಡಬೇಕಿದೆ