Publish Date: Sun, 09 Aug 2020 (19:12 IST)
Updated Date: Sun, 09 Aug 2020 (19:16 IST)
ಬಿಜೆಪಿ ಸರಕಾರದ ವಿರುದ್ಧ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದ ಕಾಂಗ್ರೆಸ್ ಕಾರ್ಯಕರ್ತೆಗೆ ಅಶ್ಲೀಲ ಕಮೆಂಟ್ ಗಳು ಬರುತ್ತಿವೆ.
ಬಿಜೆಪಿ ಸರ್ಕಾರದ ಒಂದು ವರ್ಷದ ಸಾಧನೆಗಳೇನು? ಎಂಬ ನನ್ನ ಒಂದೇ ಒಂದು ಫೇಸ್ ಬುಕ್ ಪೋಸ್ಟ್ ಗೆ ನನ್ನ ಮೇಲೆ ಅಶ್ಲೀಲ ಕಮೆಂಟ್‌ಗಳ ದಾಳಿ ಆರಂಭಿಸಿದ್ದಾರೆ. ಇದರ ಹಿಂದೆ ಬಿಜೆಪಿ ಮತ್ತು ಆರ್ ಎಸ್ಎಸ್ ಕೈವಾಡವಿದೆ ಎಂದು ಕೊಪ್ಪಳದ ಗಂಗಾವತಿಯ ಕಾಂಗ್ರೆಸ್ ಕಾರ್ಯಕರ್ತೆ ಶೈಲಜಾ ಹಿರೇಮಠ ಆರೋಪಿಸಿದ್ದಾರೆ.
ನನ್ನ ಪೇಜ್ ನಲ್ಲಿ ‘ರಾಜ್ಯ ಬಿಜೆಪಿ ಒಂದು ವರ್ಷದ ಸಾಧನೆ ಏನು? ಒಬ್ಬರಿಗೆ ಒಂದೇ ಉತ್ತರದ ಅವಕಾಶ’ ಎಂದು ಮಾಡಿದ ಪೋಸ್ಟ್ ಗೆ ಕಮೆಂಟ್ ಮಾಡಲಾಗಿದೆ. ಮಹಿಳೆಯರು ಕಿವಿಯಿಂದ ಕೇಳಲು ಹಾಗೂ ಯಾರಿಗೂ ಹೇಳಲು ಆಗದ ಕೆಟ್ಟ ಪದ ಬಳಕ ಮಾಡಿ ಕಮೆಂಟ್ ಮಾಡಿದ್ದಾರೆ. ಇವರಿಗೆಲ್ಲ ಅಕ್ಕ- ತಂಗಿ, ತಾಯಿ ಇದ್ದಾರೋ ಇಲ್ಲ ಎಂಬ ಅನುಮಾನ ಬರ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಂಥ ಹತ್ತಾರು ಸಮಸ್ಯೆ ಎದುರಿಸಿಕೊಂಡು ಬೆಳೆದ ನಾನೇ ಸಾಕಷ್ಟು ನೋವು ಉಂಡಿದ್ದೇನೆ. ಈ ಕಮೆಂಟ್ ನೋಡಿ ನನಗೂ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ನೋವಾಗಿತ್ತು ಎಂದು ಭಾವುಕರಾಗಿ ಮಾತನಾಡಿದರು.
ಇವರ ಫೇಸ್ ಬುಕ್ ಪೇಜ್ ನೋಡಿದರೆ ಇವರೆಲ್ಲ ಬಿಜೆಪಿ ಮತ್ತು ಆರ್‌ಎಸ್ಎಸ್ ನವರು ಎಂಬುದು ಗೊತ್ತಾಗುತ್ತದೆ. ತೀರಾ ಅಶ್ಲೀಲವಾಗಿ, ಅವಹೇಳನಕಾರಿಯಾಗಿ ಕಾಮೆಂಟ್ ಮಾಡಿದ 7 ಜನ ಸೇರಿದಂತೆ ಇತರರ ಮೇಲೆ ಗಂಗಾವತಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದಿದ್ದಾರೆ.