ದರ್ಗಾ ಸೇರಿದಂತೆ ಇನ್ನಿತರ ಕಡೆಗಳಲ್ಲಿ ನವಿಲುಗರಿ ಬಳಕೆ ಕುರಿತಂತೆ ಬಿಜೆಪಿ ನಾಯಕರ ಆರೋಪಕ್ಕೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಪ್ರತಿಕ್ರಿಯೆಸಿದ್ದಾರೆ.
ಬಿಜೆಪಿಗರಿಗೆ ಮಾಡಲು ಕೆಲಸವಿಲ್ಲ. ಹೀಗಾಗಿ ಎಲ್ಲದನ್ನೂ ವಿವಾದ ಮಾಡುತ್ತಾರೆ.ಇನ್ನು ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಸೆಕ್ಷನ್ 43ರ ಅಡಿಯಲ್ಲಿ ನವಿಲುಗರಿಗಳಿಗೆ ವಿನಾಯಿತಿ ನೀಡಲಾಗಿದೆ ಎಂದು ಹೇಳಿದ್ದಾರೆ.
ಅಕ್ರಮವಾಗಿ ವನ್ಯಜೀವಿಗಳ ದೇಹದ ಭಾಗ ಮತ್ತು ಅದರಿಂದ ಮಾಡಿರುವ ವಸ್ತುಗಳನ್ನು ಹೊಂದಿರುವವರು ಅದನ್ನು ಅರಣ್ಯ ಇಲಾಖೆಗೆ ಒಪ್ಪಿಸಲು 2 ತಿಂಗಳ ಕಾಲಾವಕಾಶ ನೀಡಲು ಚಿಂತನೆ ನಡೆಸಲಾಗಿದೆ.ಮಾಹಿತಿಯ ಕೊರತೆಯಿಂದ ಯಾರಾದರು ತಮ್ಮ ಬಳಿ ಇಟ್ಟುಕೊಂಡಿರುವವರು ವನ್ಯಜೀವಿಗಳ ದೇಹದ ಭಾಗವನ್ನು ಅರಣ್ಯ ಇಲಾಖೆಗೆ ಒಪ್ಪಿಸಲು ಅವಕಾಶ ನೀಡುವುದಾಗಿ ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ಗುರುವಾರ ಘೋಷಣೆ ಮಾಡಿದ್ದಾರೆ.