ದೀಪಾವಳಿಯ ಆಚರಣೆ ಶುರುವಾಗಿದ್ದು ಶ್ರೀರಾಮನ ಕಾಲದಿಂದ. ತ್ರೇತಾಯುಗದ ಸಮಯದಲ್ಲಿ ಪ್ರಭು ಶ್ರೀರಾಮಚಂದ್ರನು ಹದಿನಾಲ್ಕು ವರ್ಷಗಳ ಕಾಲ ವನವಾಸವನ್ನು ಮುಗಿಸಿ ಅಯೋಧ್ಯೆಗೆ ಹಿಂದಿರುಗಿದಾಗ ಪ್ರಜೆಗಳು ಬಂಗಾರದ ಕಲಶವನ್ನು ಚಿನ್ನ ಹಗೂ ಮಣಿ, ರತ್ನಗಳಿಂದ ಅಲಂಕರಿಸಿ ಮನೆಯೆದುರು ಹೊಸ್ತಿಲಿನ ಮೇಲಿಟ್ಟರು,
ಸಂಪೂರ್ಣ ಅಯೋಧ್ಯೆಯನ್ನು ದೀಪದಿಂದ ಬೆಳಗಿಸಿದರು. 14 ವರ್ಷಗಳ ಕಾಲ ಕತ್ತಲು ಕವಿದಿದ್ದ ಅಯೋಧ್ಯಾನಗರಕ್ಕೆ ಶ್ರೀರಾಮಚಂದ್ರ ಪ್ರಭುವು ಬೆಳಕಾಗಿ ಬಂದನು. ಶ್ರೀರಾಮಚಂದ್ರ ಪ್ರಭುವಿನ ಆಗಮನದ ದಿನವನ್ನು ಪ್ರತಿ ವರ್ಷವು ಬೆಳಕಿನ ಹಬ್ಬವಾಗಿ, ದೀಪಾವಳಿ ಎಂದು ಸಂಭ್ರಮದಿಂದ ಎಲ್ಲೆಡೆ ಆಚರಿಸಲಾಗುತ್ತದೆ.
ದೀಪಾವಳಿ ಹಬ್ಬದ ಹಿನ್ನೆಲೆಯನ್ನು ಕೆದಕುತ್ತಾ ಹೋದರೆ ಹಲವರು ಕಥೆಗಳು, ಉಲ್ಲೇಖಗಳು ಕಣ್ಣೆದುರಿಗೆ ಬಂದು ನಿಲ್ಲುತ್ತವೆ. ಆದರೆ ಮೂಲತಃವಾಗಿ ದೀಪಾವಳಿ ಆರಂಭವಾದ ಬಗ್ಗೆ ಅರಿಯುವುದು ಸ್ವಲ್ಪ ಕಷ್ಟವೇ ಆಗಿದೆ. ಆದರೂ ದೀಪಾವಳಿ ಹೇಗೆ ಶುರುವಾಯ್ತು ಅನ್ನೋದನ್ನು ಒಂದಾದಾಗಿಯೇ ಬಿಚ್ಚಿಡುವ ಯತ್ನ ವೆಬ್‌ದುನಿಯಾ ಮಾಡುತ್ತಿದೆ..