Publish Date: Sat, 02 May 2020 (09:28 IST)
Updated Date: Sat, 02 May 2020 (09:30 IST)
ಬೆಂಗಳೂರು: ಜ್ಯೋತಿಷ್ಯ, ಅಪಾರ ಧಾರ್ಮಿಕ ಶ್ರದ್ಧೆಯಿರುವ ಸಿಎಂ ಯಡಿಯೂರಪ್ಪ ತಮ್ಮ ಮನೆಗೆ ಇಬ್ಬರು ಹೊಸ ಅತಿಥಿಗಳನ್ನು ಬರಮಾಡಿಕೊಂಡಿದ್ದಾರೆ.
ಜ್ಯೋತಿಷಿಗಳು ಸಿಎಂ ಯಡಿಯೂರಪ್ಪಗೆ ಪ್ರತಿನಿತ್ಯ ಬೆಳಿಗ್ಗೆ ಗೋವುಗಳ ಪೂಜೆ ನಡೆಸಿ ಮನೆಯಿಂದ ಹೊರಹೋಗಲು ಸಲಹೆ ನೀಡಿದ್ದರಂತೆ. ಅದರಂತೆ ಸಿಎಂ ತಮ್ಮ ನಿವಾಸಕ್ಕೆ ಗಿರ್ ತಳಿಯ ಎರಡು ಗೋವುಗಳನ್ನು ಬರಮಾಡಿಕೊಂಡಿದ್ದಾರೆ.
ಇನ್ನು ಮುಂದೆ ಸಿಎಂ ಪ್ರತಿನಿತ್ಯ ಈ ಗೋವುಗಳಿಗೆ ಪೂಜೆ ಸಲ್ಲಿಸಿ ನಿತ್ಯದ ಕೆಲಸಗಳಿಗೆ ತೆರಳಲಿದ್ದಾರಂತೆ. ಯಡಿಯೂರಪ್ಪನವರ ಗೋವುಗಳ ಮೇಲಿನ ವಿಶೇಷ ಪ್ರೀತಿ ಇದರಲ್ಲಿ ಸಾಬೀತಾಗುತ್ತದೆ.