Publish Date: Sat, 25 Jan 2020 (09:18 IST)
Updated Date: Sat, 25 Jan 2020 (09:20 IST)
ಬೆಂಗಳೂರು: ದಾವೋಸ್ ಪ್ರವಾಸ ಮುಗಿಸಿ ತವರಿಗೆ ಬಂದಿಳಿದ ಸಿಎಂ ಯಡಿಯೂರಪ್ಪಗೆ ಮತ್ತೆ ಸಂಪುಟ ಸಂಕಟ ಶುರುವಾಗಿದೆ. ಸಿಎಂ ವಿದೇಶಕ್ಕೆ ತೆರಳಿದ ಮೇಲೆ ಕೆಲವು ದಿನ ತಣ್ಣಗಾಗಿದ್ದ ಸಂಪುಟ ವಿಸ್ತರಣೆ ಚರ್ಚೆ ಈಗ ಮತ್ತೆ ಶುರುವಾಗಿದೆ.
ಅತೃಪ್ತರು ಮತ್ತು ಬಿಜೆಪಿ ಶಾಸಕರು ಸಚಿವ ಸ್ಥಾನಕ್ಕಾಗಿ ಸಿಎಂಗೆ ಒತ್ತಡ ಹೇರಲು ಆರಂಭಿಸಿದ್ದಾರೆ. ಈ ನಡುವೆ ಸೋತವರಿಗೂ ಸಚಿವ ಸ್ಥಾನ ನೀಡಬೇಕು ಎಂಬುದು ಕಾಂಗ್ರೆಸ್ ನಿಂದ ಬಿಜೆಪಿಗೆ ಬಂದ ನಾಯಕರ ಬೇಡಿಕೆಯಾಗಿದೆ. ಆದರೆ ಉಪಚುನಾವಣೆಯಲ್ಲಿ ಸೋತವರಿಗೆ ಸಚಿವ ಸ್ಥಾನವಿಲ್ಲ ಎಂದು ಸಿಎಂ ಖಚಿತಪಡಿಸಿದ್ದಾರೆ. ಇದು ಅತೃಪ್ತರು ಮತ್ತು ಸಿಎಂ ನಡುವಿನ ಸಂಘರ್ಷಕ್ಕೆ ಎಡೆಮಾಡಿಕೊಡಲಿದೆ.
ಆದರೆ ಸೋತವರನ್ನು ವಿಧಾನಪರಿಷತ್ ಗೆ ಆಯ್ಕೆ ಮಾಡುವ ಭರವಸೆ ನೀಡುವ ಅಸ್ತ್ರವನ್ನೂ ಸಿಎಂ ರೆಡಿ ಮಾಡಿಕೊಂಡಿದ್ದಾರೆ. ಅದೇನೇ ಇದ್ದರೂ ಈ ಮಾಸಂತ್ಯದೊಳಗೆ ಸಂಪುಟ ವಿಸ್ತರಣೆ ಮಾಡುವ ಭರವಸೆಯಲ್ಲಿ ಸಿಎಂ ಇದ್ದಾರೆ.