Publish Date: Wed, 22 Jan 2020 (07:31 IST)
Updated Date: Wed, 22 Jan 2020 (07:33 IST)
ಕಲಬುರಗಿ : ಮಂಗಳೂರಿನಲ್ಲಿ ಬಾಂಬ್ ಪತ್ತೆ ಮತ್ತು ಹಿಂದುತ್ವ ಪ್ರತಿಪಾದಕ ನಾಯಕರ ಹತ್ಯೆಯ ರೂವಾರಿಗಳ ಬಂಧನದ ಹಿಂದೆ ಬಿಜೆಪಿ ಹಲವಾರು ಕಥೆಗಳನ್ನು ಕಟ್ಟುತ್ತಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಕಲಬುರಗಿಯಲ್ಲಿ ನಡೆದ ಸಿಎಎ ವಿರೋಧಿ ಸಮಾವೇಶದಲ್ಲಿ ಮಾತನಾಡಿದ ಅವರು, ಆರ್.ಎಸ್.ಎಸ್. ಮತ್ತು ವಿಶ್ವ ಹಿಂದೂ ಪರಿಷತ್ತಿನ ಮುಖಂಡ ಪ್ರಭಾಕರ್ ಭಟ್ ತಮ್ಮ ರಿಮೋಟ್ ಕಂಟ್ರೋಲ್ ಆಗಿ ಬಿಜೆಪಿಯನ್ನು ಇಟ್ಟುಕೊಂಡಿದ್ದಾರೆ. ಬಾಂಬ್ ಪ್ರಕರಣವನ್ನು ಮುಂದಿಟ್ಟುಕೊಂಡು ಬಿಜೆಪಿ ರಾಜ್ಯದಲ್ಲಿ ಆತಂಕದ ವಾತಾವರಣ ಸೃಷ್ಟಿಮಾಡಲು ಹೊರಟಿದೆ. ಬಿಜೆಪಿಯ ಬ್ಯಾಕ್ ಸೀಟ್ ನಲ್ಲಿ ವಿಶ್ವ ಹಿಂದೂ ಪರಿಷತ್ತಿದೆ ಎಂದು ಆರೋಪಿಸಿದ್ದಾರೆ.
ಅಲ್ಲದೇ ಅಮಿತ್ ಶಾ ಅವರು ನೆಹರು ಮಾಡಿದ ತಪ್ಪು ತಿದ್ದುತ್ತೇನೆ ಎಂದು ಭಾಷಣ ಮಾಡುತ್ತಾರೆ. ಆದರೆ ನೆಹರು ಬದುಕಿದ್ದ ಕಾಲಮಾನದಲ್ಲಿ ಅಮಿತ್ ಶಾ ಇನ್ನೂ ಹುಟ್ಟಿರಲಿಲ್ಲ ಎಂದು ಅವರು ವ್ಯಂಗ್ಯ ಮಾಡಿದ್ದಾರೆ.