ಮೈಸೂರು: ದಸರಾ ಮಹೋತ್ಸವದ ಸಂದರ್ಭದಲ್ಲಿ ವಾಯುಸೇನೆಯ ಲೋಹದ ಹಕ್ಕಿಗಳು ಆಗಸದಲ್ಲಿ ತಮ್ಮ ಶಕ್ತಿ ಪ್ರದರ್ಶಿಸಿತು.
ಪಂಜಿನಕವಾಯತು ಮೈದಾನದಲ್ಲಿ ಭಾರತೀಯ ವಾಯುಪಡೆಯ ಯೋಧರು ಎ.ಎಲ್.ಎಚ್., ಎಂ.ಐ.17 ಮತ್ತು ಎಂ.ಐ.17 ವಿ5 ಹೆಲಿಕಾಪ್ಟರ್ಗಳ ಮೂಲಕ ಪೆಟಲ್ ಡ್ರಾಪ್, ಸ್ಲಿತರಿಂಗ್ ಮತ್ತು ವಾಯುಪಡೆಯ ಪ್ರಖ್ಯಾತ ಆಕಾಶ್ ಗಂಗಾ ತಂಡದ 8 ಸದಸ್ಯರು ಬಣ್ಣ ಬಣ್ಣದ ಪ್ಯಾರಾಚ್ಯೂಟ್ ಜತೆ ಭೂ ಸ್ಪರ್ಶಿಸಿದರು. ಈ ವೇಳೆ ಜನರು ನೋಡಿ ಸಂಭ್ರಮಿಸಿದರು. ತ್ರಿವರ್ಣ ಧ್ವಜದ ಮಾದರಿಯ ಪ್ಯಾರಾಚೂಟ್ ಜನರನ್ನ ಹೆಚ್ಚು ಆಕರ್ಷಿಸಿತು.
ಇದೇವೇಳೆ ಸಿಎಂ ಸಿದ್ದರಾಮಯ್ಯ, ಸಚಿವರಾದ ಡಾ. ಹೆಚ್.ಸಿ.ಮಹದೇವಪ್ಪ, ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಆಂಜನೇಯ ಏರ್ ಶೋನಲ್ಲಿ ಭಾಗಿಯಾಗಿದ್ದರು.
ಬಳಿಕ ಮಾತನಾಡಿದ ಸಿಎಂ, ದೆಹಲಿಯಲ್ಲಿ ರಕ್ಷಣಾ ಸಚಿವರನ್ನು ಭೇಟಿ ಮಾಡಿ ಈ ಬಾರಿಯ ದಸರಾ ಮಹೋತ್ಸವದಲ್ಲಿ ವಾಯುಸೇನೆಯ ಏರ್ ಶೋ ನಡೆಸಯವಂತೆ ಕೇಳಿಕೊಳ್ಳಲಾಗಿತ್ತು ಎಂದು ತಿಳಿಸಿದರು.
ಇದೇ ಮೊದಲ ಬಾರಿಗೆ ಮೊಮ್ಮಕ್ಕಳ ಜತೆ ದಸರಾ ಮಹೋತ್ಸವದಲ್ಲಿ ಏರ್ ಶೋ ನೋಡಿದ್ದು, ಬಹಳ ಸಂತೋಷವಾಯಿತು. ಮಕ್ಕಳು ಖುಷಿಯಿಂದ ನೋಡಿದರು ಎಂದರು.